ಏ.11ಕ್ಕೆ ಯಲ್ಲಾಪುರದಲ್ಲಿ ಜಿಲ್ಲಾಮಟ್ಟದ ಸಮಾವೇಶ
ಯಲ್ಲಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿಟ್ಟ ಹಣ ದುರ್ಬಳಕೆ, ಹಾಗೂ ಮುಸ್ಲಿಂ ತುಷ್ಠೀಕರಣ ನೀತಿ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದ್ದು, ಏ. 11ರಂದು ಶುಕ್ರವಾರ ಉತ್ತರ ಕನ್ನಡ ಜಿಲ್ಲಾಮಟ್ಟದ ಪಾದಯಾತ್ರೆ, ಸಮಾವೇಶ ಯಲ್ಲಾಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಹೇಳಿದರು.
ಅವರು ಈ ಕುರಿತು ಮಂಗಳವಾರ ಪತ್ರಕರ್ತರೊಂದಿಗೆ ಮಾತನ್ನಾಡಿ, ಏ. 11 ರಂದು ಬೆಳಿಗ್ಗೆ 10.30 ಕ್ಕೆ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜನಾಕ್ರೋಶ ಪಾದಯಾತ್ರೆ ಪ್ರಾರಂಭಿಸಲಾಗುತ್ತದೆ. ಪಟ್ಟಣದ ದೇವಿ ದೇವಸ್ಥಾನದಿಂದ ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್ ಅಂಬೇಡ್ಕರ್ ಸರ್ಕಲ್ ಮೂಲಕ ವೈಟಿಎಸ್ ಎಸ್ ಮೈದಾನದಲ್ಲಿ ಪಾದಯಾತ್ರೆ ಸಂಪನ್ನಗೊಳ್ಳಲಿದೆ. ನಂತರ ವೈಟಿಎಸ್ಎಸ್ ಮೈದಾನದಲ್ಲಿ ಜನಾಜ್ರೋಶಯಾತ್ರೆಯ ಸಮಾವೇಶ ನಡೆಯಲಿದೆ. ಪಾದಯಾತ್ರೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 3 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ರಾಜ್ಯ ಬಿಜೆಪಿ ನಾಯಕರ ತಂಡ,ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ,ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಹೋರಾತ್ರಿ ಧರಣಿಯಲ್ಲಿ ಜಿಲ್ಲೆಯಿಂದ ೩೦೦ ಕ್ಕೂ ಹೆಚ್ಚುಜನ ಭಾಗವಹಿಸಿದ್ದರು.
ರಾಜ್ಯ ಸರಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಅಭಿವೃದ್ದಿ ಶೂನ್ಯವಾಗಿದೆ. ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಬಜೆಟ್ ನಲ್ಲಿ ಧರ್ಮಾದಾರಿತ ಮುಸ್ಲಿಂ ತುಷ್ಠಿಕರಣ ಬಜೆಟ್ ಮಂಡಿಸಿದ್ದಾರೆ. ಎರಡು ವರ್ಷದಲ್ಲಿ ಮೂರು ಬಾರಿ
ಹಾಲಿನದ ದರ ಏರಿಸಲಾಗಿದೆ. ಕುಡಿಯುವ ನೀರಿನ ದರ,ವಿದ್ಯುತ್ ದರ, ಡಿಸೈಲ್ ದರ ಏರಿಕೆ, ಬಸ್ ದರ ಏರಿಸಲಾಗಿದೆ.ಇದರಿಂದ ಜನಸಾಮಾನ್ಯರಿಗೆ ಬದುಕು ದುಸ್ತರವಾಗಿದೆ. ಬಿಜೆಪಿಯ ಹೋರಾಟಕ್ಕೆ ಜನ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಪ್ರಮುಖರಾದ, ಶಿವಾಜಿ ನರಸಾನಿ, ಗುರುಪ್ರಸಾದ ಹೆಗಡೆ,ಚಂದ್ರಕಲಾ ಭಟ್ಟ, ಉಮೇಶ ಭಾಗ್ಚತ್,ಪ್ರಸಾದ ಹೆಗಡೆ,ನಟರಾಜ ಗೌಡರ,ರವಿ ಕೈಟ್ಕರ್,ಉಷಾ ಹೆಗಡೆ ಮುಂತಾದವರು ಇದ್ದರು.