ಸಿದ್ದಾಪುರ : ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉಚ್ಚ ಸ್ಥಾನ ಇದೆ. ಗುರುಹಿರಿಯರಲ್ಲಿ ಭಕ್ತಿ ಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾಳೆ. ಸ್ವಾಭಿಮಾನ, ಪ್ರತಿಭೆ ಇದೆ. ಹೆಣ್ಣು ನಾಲ್ಕು ತಂತಿಯ ವೀಣೆ. ಸತ್ಯ, ತ್ಯಾಗ, ಸಹನೆ, ತಾಳ್ಮೆಯ ಪ್ರತಿರೂಪ. ಕರುಣಾಮಯಿ, ಸಹನಾಶೀಲೆ ಹೃದಯವಂತಳು. ತ್ಯಾಗಮಯಿ. ಅವಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಜೀವನ ರಥ ಸರಿಯಾಗಿ ನಡೆಯಲು ಗಂಡು ಹೆಣ್ಣು ಸರಿಸಮನಾಗಿ ಬದುಕು ನಡೆಸಬೇಕು. ಪುರುಷರು ಹೆಣ್ಣನ್ನು ಬೆನ್ನು ತಟ್ಟಿ ಸಾಧನೆಗೆ ದಾರಿಯಾಗಬೇಕು. ಗಾಯಕಿ ಸುಮಿತ್ರಾ ಶೇಟ್ ಹೇಳಿದರು.
ಅವರು ಪಟ್ಟಣದ ಹೊಸೂರಿನ ಎಂ.ಕೆ.ನಾಯ್ಕ ಹೊಸಳ್ಳಿ ಅವರ ಮನೆಯಂಗಳದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ ಮಹಿಳಾ ಸಂವೇದನೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಆಶಯನುಡಿಯಾಡಿದ ಶಿಕ್ಷಕಿ ವಿನೋದಾ ಭಟ್ ಮಹಿಳಾ ಸಂವೇದನೆ ಮತ್ತು ಅದರ ಮಹತ್ವದ ಜೊತೆ ಅಂಗಳದಿಂದ ಮಂಗಳನವರೆಗಿನ ಮಹಿಳಾ ಸಾಧನೆ ತಿಳಿಸಿದರು. ಕವಿ ಕೆ.ಬಿ.ವೀರಲಿಂಗನ ಗೌಡ್ರ ಮಾತನಾಡಿ ಕವಿತೆ ಲಿಂಗ, ಜಾತಿ, ಧರ್ಮ ಮೀರಿರುವ ಅದ್ಭುತ ಶಕ್ತಿ. ಕವಿ ಮತ್ತು ಕವಿತೆ ನಡುವೆ ಅವಿನಾಭಾವ ಸಂಬಂಧವಿದೆ. ಕವಿ ಸೋತರಷ್ಟೇ ಕವಿತೆ ಗೆಲ್ಲುವುದು. ಕವಿತೆ ತುಂಬಾ ಹಚ್ಚಿಕೊಂಡರೆ ನಮ್ಮ ಮೈ ತುಂಬ ಗಾಯಗಳಾಗಿವೆ ಎಂದರ್ಥ. ಕವಿತೆಗಳನ್ನು ಕವಿ ಗೆಲ್ಲಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಜಿ. ಜಿ. ಹೆಗಡೆ ಬಾಳಗೋಡು, ಎಂ. ಕೆ. ನಾಯ್ಕ ಹೊಸಳ್ಳಿ, ಗೋಪಾಲ ನಾಯ್ಕ ಭಾಶಿ, ಸುರೇಶ ಕಡಕೇರಿ ಮಾತನಾಡಿದರು. ಅಣ್ಣಪ್ಪ ಶಿರಳಗಿ, ರತ್ನಾಕರ ಪಾಲೆಕರ್, ಕನ್ನೇಶ ಕೋಲಸಿರ್ಸಿ, ದಿವಾಕರ ನಾಯ್ಕ, ವಿಠ್ಠಲ ಅವರಗುಪ್ಪ ಉಪಸ್ಥಿತರಿದ್ದರು.
ಸುಜಾತ ಹೆಗಡೆ, ಸುಧಾರಾಣಿ ನಾಯ್ಕ, ಟಿ ಕೆ ಎಂ ಆಜಾದ್, ಎಸ್.ಕೆ.ನಾಯ್ಕ, ಎಂ. ಎನ್.ನಾಯ್ಕ, ಲಕ್ಷ್ಮಣ ಬಡಿಗೇರ್, ವಸಂತಕುಮಾರ್, ಕು. ತೃಪ್ತಿ ನಾಯ್ಕ, ಕು. ಸಹನಾ ಉದ್ದಿನಗದ್ದೆ, ನಾಗರತ್ನ ನಾಯ್ಕ, ನವೀನ್ ಮನಮನೆ ಕವನ ವಾಚಿಸಿದರು.
ಕಸಾಪ ಕೋಶಾಧ್ಯಕ್ಷರಾದ ಪಿ.ಬಿ.ಹೊಸೂರು ಸ್ವಾಗತಿಸಿದರು. ಎಂ.ಎನ್.ನಾಯ್ಕ ನಿರೂಪಿಸಿದರು. ಪ್ರಶಾಂತ ಶೇಟ್ ವಂದಿಸಿದರು.