ಸಿದ್ದಾಪುರ: ತಾಲೂಕಿನ ಕಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏಳನೇ ತರಗತಿಯ ದೀಪದಾನ ಕಾರ್ಯಕ್ರಮ ನಡೆಯಿತು. ಭಾರತ ಮಾತೆಯ ಚಿತ್ರ ಬಿಡಿಸಿ ಅದರ ಗಡಿರೇಖೆಯಲ್ಲಿ ವಿದ್ಯಾರ್ಥಿಗಳು ದೀಪವನ್ನು ಹಚ್ಚಿ ಬೀಳ್ಕೊಡುಗೆ ಹಾಡನ್ನು ಹಾಡಿದರು.
ಅದೇ ವೇದಿಕೆಯಲ್ಲಿ 2ನೆ ಸಮುದಾಯದತ್ತ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಲಾಯಿತು ಎಸ್ಡಿಎಮ್ಸಿ ಅಧ್ಯಕ್ಷ ಪ್ರಭಾಕರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯ ಚಂದ್ರಕಾಂತ ನಾಯ್ಕ, ಗ್ರಾಮ ಕಮಿಟಿ ಅಧ್ಯಕ್ಷ ಚನ್ನಪ್ಪ ನಾಯ್ಕ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್, ರಾಜು ಉಪಸ್ಥಿತರಿದ್ದು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
7ನೆ ತರಗತಿಯ ಎಲ್ಲಾ ಮಕ್ಕಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಗೀತಾ ನಿರೂಪಿಸಿದರು. ಮುಖ್ಯ ಶಿಕ್ಷಕರ ಶ್ರೀಕಾಂತ್ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು . ಶಿಕ್ಷಕರಾದ ಪಲ್ಲವಿ ಮತ್ತು ಭಾಸ್ಕರ ಸಹಕರಿಸಿದರು. ವಿದ್ಯಾರ್ಥಿಗಳ ಪಾಲಕರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.