ಅಂಕೋಲಾ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾ-೨೦೨೫ ರ ಅಂಗವಾಗಿ ಮೂರು ತಲೆಮಾರಿನ ವಯಕ್ತಿಕ ದಾಖಲೆ-ಕಾನೂನಾತ್ಮಕ ವಿಶ್ಲೇಷಣೆ ಕಾರ್ಯಕ್ರಮವನ್ನು ಏಪ್ರೀಲ್ ೮ ಮುಂಜಾನೆ ೧೦ ಗಂಟೆಗೆ ಅಂಕೋಲಾ ತಾಲೂಕಿನ ಸತ್ಯಾಗ್ರಹ ಭವನದ ಪದ್ಮಶ್ರೀ ಸುಕ್ರಿ ಗೌಡ ಮತ್ತು ಪದ್ಮಶ್ರೀ ತುಳಸಿ ಗೌಡ ಅವರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಜಾಥಾ ಪ್ರಾರಂಭವಾಗಿ, ಕೊನೆಯಲ್ಲಿ ಸ್ವತಂತ್ರ ಭವನದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳು ತಿರಸ್ಕಾರ ಮತ್ತು ಮೂರು ತಲೆಮಾರಿನ ವಯಕ್ತಿಕ ದಾಖಲೆ ಅಪಾರ್ಥವಾಗಿ ಅರ್ಥೈಸುವಿಕೆಯಿಂದ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿರುವ ಹಿನ್ನಲೆಯಲ್ಲಿ ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳಿಗೆ ಕಾನೂನು ಸಬಲೀಕರಣ ಮಾಡುವ ಉದ್ದೇಶದಿಂದ ಕಾನೂನು ಜಾಗೃತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.
ಅಂಕೋಲಾ ೩,೪೨೨ ಅರ್ಜಿ ತಿರಸ್ಕೃತ:
ಅಂಕೋಲಾ ತಾಲೂಕಿನಲ್ಲಿ ಪಾರಂಪರಿಕ ಅರಣ್ಯವಾಸಿಗಳು ೪,೯೮೦ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ವಿಭಾಗ ಮತ್ತು ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ೩,೪೭೨ ಅರ್ಜಿಗಳು ತಿರಸ್ಕಾರವಾಗಿದೆ ಬಂದಿರುವAತಹ ಅರ್ಜಿಗಳಲ್ಲಿ ಶೇ.೬೯.೭೧ ಅರ್ಜಿಗಳು ತಿರಸ್ಕಾರವಾಗಿದ್ದು, ಕೇವಲ ೫ ಪಾರಂಪರಿಕ ಅರಣ್ಯವಾಸಿಗಳಿಗೆ ಮಾತ್ರ ಸಾಗುವಳಿ ಹಕ್ಕು ದೊರಕಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದರು.