ಶಿರಸಿ: ಬೆಂಗಳೂರು -ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಹಾವೇರಿಯಲ್ಲಿ ನಿಲುಗಡೆಗೆ ರೈಲು ಸಚಿವರು ಒಪ್ಪಿಗೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತವಾಗಿದೆ. ಇತ್ತೀಚೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾವೇರಿಯಲ್ಲಿ ರೈಲು ನಿಲುಗಡೆ ಕುರಿತು ಉಲ್ಲೇಖಿಸಿದ್ದರು. ಹಾವೇರಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಂದೆ ಭಾರತ್ ರೈಲು ಈ ಭಾಗದ ಜನಪ್ರಿಯ ಹಾಗೂ ಗರಿಷ್ಠ ವೇಗದಲ್ಲಿ ಬೆಂಗಳೂರನ್ಬು ತಲಪುವುದಾಗಿದೆ. ಪ್ರಯಾಣಿಕರು ನಿಲುಗಡೆಯ ಉಪಯೋಗವನ್ನು ಪಡೆದು ಕೊಳ್ಳಬೇಕು ಎಂದು ಕೋರಿದ್ದರು.
ಹಾವೇರಿಯಲ್ಲಿ ರೈಲು ನಿಲುಗಡೆಯು ಉ.ಕ.ಜಿಲ್ಲೆಯ ಶಿರಸಿ, ಯಲ್ಲಾಪುರ ಹಾಗೂ ಇತರ ತಾಲೂಕಗಳ ಪ್ರಯಾಣಿಕರಿಗೆ ಬೆಂಗಳೂರಿಗೆ ಹೋಗಿಬರಲು ಹೆಚ್ಚು ಅನುಕೂಲವಾಗಲಿದೆ. ಇನ್ನೂ ನಿಲುಗಡೆಯ ದಿನಾಂಕ ಪ್ರಕಟವಾಗಿಲ್ಲ. ಆದರೆ ನಿಲುಗಡೆಗೆ ಸಕಾರಾತ್ಮಕ ವಾಗಿ ಸ್ಪಂದಿಸಲಾಗಿದೆ. ಇದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರು ರಾತ್ರಿ ಪ್ರಯಾಣದಲ್ಲಿ ಅನಭವಿಸುವ ಯಾತನೆ ಕೂಡ ಈಗ ದೂರವಾಲಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.