Slide
Slide
Slide
previous arrow
next arrow

‘ಅರಿಂದಮ್’ ಚಲನಚಿತ್ರ ಸದ್ಯದಲ್ಲಿ ಬಿಡುಗಡೆ: ಕಲ್ಕಿ ಅಗಸ್ತ್ಯ

300x250 AD

ದಾಂಡೇಲಿ : ಕನ್ನಡ ಚಲನಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಕಲಾವಿದರು ಸಹ ಮಿಂಚಬೇಕು. ಈ ಭಾಗದ ಕಲಾವಿದರನ್ನು ನಾಡಿಗೆ ಪರಿಚಯಿಸಬೇಕೆಂಬ ಬಹು ವರ್ಷಗಳ ಕನಸು ಅರಿಂದಮ್ ಚಲನಚಿತ್ರದ ಮೂಲಕ ಈಡೇರಿದೆ. ಅರಿಂದಮ್ ಚಲನಚಿತ್ರದ ಹೆಚ್ಚಿನ ದೃಶ್ಯಗಳನ್ನು ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲು ಚಿತ್ರಿಕರಣ ಮಾಡಿದ್ದು, ಈ ಚಲನಚಿತ್ರದಲ್ಲಿ ಬಹುತೇಕ ದಾಂಡೇಲಿಯ ಕಲಾವಿದರೆ ನಟಿಸಿದ್ದಾರೆ. ಈ ಚಲನಚಿತ್ರ ಇದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅರಿಂದಮ್ ಚಲನಚಿತ್ರದ ನಿರ್ದೇಶಕ ಹಾಗೂ ನಾಯಕ ನಟನಾಗಿರುವ ಕಲ್ಕಿ ಅಗಸ್ತ್ಯ ಹೇಳಿದರು.

ಅವರು ಗುರುವಾರ ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ವಯಸ್ಸಿಗೆ ಮೀರಿದ ನಡವಳಿಕೆ ಮತ್ತು ಬುದ್ಧಿಶಕ್ತಿಯನ್ನು ಹೊಂದಿರುವ ಯುವಕ ದುಷ್ಟಶಕ್ತಿಗಳ ವಿರುದ್ಧ ನಡೆಸುವ ಹೋರಾಟ ಹಾಗೂ ಪ್ರೀತಿ ಪ್ರೇಮದ ಸುತ್ತ ಸುತ್ತುವ ಕಥೆ ಇದಾಗಿದೆ. ಅರಿ ಅಂದರೆ ಶತ್ರು, ದಮ್ ಅಂದ್ರೆ ನಾಶ ಮಾಡುವವನು, ಶಿವ, ವಿಷ್ಣುವಿನ ಪ್ರತಿರೂಪ ಎಂದರ್ಥ. 20 ವರ್ಷದ ಕಾಳಿ 40 ವರ್ಷದ ವ್ಯಕ್ತಿಯಂತೆ ವರ್ತಿಸುತ್ತಾನೆ. ಕಡಿಮೆ ಮಾತಾಡುವ ಆತನ ಮಾತುಗಳಿಗೆ ತೂಕ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಕಾಳಿ ತನ್ನವರು ಎನಿಸಿಕೊಂಡವರ ರಕ್ಷಣೆಗೆ ನಿಂತಾಗ ಆತನ ವಿರುದ್ಧ ಒಂದು ಚಕ್ರವ್ಯೂಹವೇ ಸೃಷ್ಟಿಯಾಗುತ್ತದೆ. ಚಕ್ರವ್ಯೂಹವನ್ನು ಭೇದಿಸಿ ಹೇಗೆ ಹೊರಗೆ ಬರುತ್ತಾನೆ ಎಂಬುದೇ ಚಲನಚಿತ್ರದ ಪ್ರಮುಖ ಕಥೆಯಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಈ ಚಲನಚಿತ್ರದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಕಡೆಯವರನ್ನು ಬಳಸಿಕೊಳ್ಳಲಾಗಿದೆ. ದಾಂಡೇಲಿಯ ಕಲಾವಿದರ ಜೊತೆಗೆ ನಾಯಕ ನಟಿಯಾಗಿ ಕಾರವಾರದ ಶ್ವೇತ ಭಟ್ ಅವರು ಅಭಿನಯಿಸಿದ್ದಾರೆ ಎಂದು ಕಲ್ಕಿ ಅಗಸ್ತ್ಯ ಅವರು ಹೇಳಿದರು. ಅತ್ಯಂತ ಕಷ್ಟಪಟ್ಟು ಎಲ್ಲರ ಸಹಕಾರದಲ್ಲಿ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದಿಂದ ತನ್ನದೇ ಆದ ಕೊಡುಗೆಯನ್ನು ನೀಡಬೇಕೆಂಬ ಮಹತ್ವಕಾಂಕ್ಷಿ ಉದ್ದೇಶದಿಂದ ಸಿದ್ಧಗೊಂಡ ಚಲನಚಿತ್ರ ಇದಾಗಿದೆ. ಕುಟುಂಬಸ್ಥರೆಲ್ಲರೂ ನೋಡಬಹುದಾದಂತಹ ಅತ್ಯುತ್ತಮ ಕಥೆಯನ್ನು ಈ ಚಲನಚಿತ್ರ ಹೊಂದಿದೆ. ನಾಡಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಈ ಚಲನಚಿತ್ರವನ್ನು ವೀಕ್ಷಿಸಿ ನಮ್ಮ ಶ್ರಮಕ್ಕೆ ಪ್ರೋತ್ಸಾಹವನ್ನು ನೀಡಿ, ಆಶೀರ್ವದಿಸುವಂತೆ ಕಲ್ಕಿ ಅಗಸ್ತ್ಯ ಅವರು ಮನವಿ ಮಾಡಿದರು.

300x250 AD

ಈ ಸಂದರ್ಭದಲ್ಲಿ ಈ ಚಲನಚಿತ್ರದಲ್ಲಿ ನಟನೆ ಮಾಡಿದ ನಗರದ ಕಲಾವಿದರುಗಳಾದ ಶ್ರೀಮಂತ ಮದರಿ, ಹನುಮಂತ ಕಾರ್ಗಿ, ಎಸ್.ಎಸ್.ಕುರ್ಡೇಕರ, ದುಂಡಪ್ಪ ಗೋಳೂರು, ಸರ್ಫರಾಜ್ ಶೇಖ, ದೇವೇಂದ್ರ ಎಂ.ನವಲೆ, ಕಾಳುರಾಮ ದರ್ಜೆ, ಶಂಕ್ರಯ್ಯ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top