ಬನವಾಸಿ: ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಬನವಾಸಿಯ ಶ್ರೀ ಉಮಾ ಮಧುಕೇಶ್ವರ ದೇವರ ಮಹಾ ರಥೋತ್ಸವವು ಏಪ್ರಿಲ್ 8, ಮಂಗಳವಾರ ನಡೆಯಲಿದೆ. ಜಾತ್ರಾ ಧಾರ್ಮಿಕ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು ಏಪ್ರಿಲ್ 1ರಂದು ಮಹಾ ಗಣಪತಿ ಪೂಜೆ, ಸಂಕಲ್ಪ, ಏಪ್ರಿಲ್ 2ರಂದು ಧ್ವಜಾರೋಹಣ, ಭೇರಿತಾಡನ, ಮಹಾಬಲಿ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾ ಯಂತ್ರೋತ್ಸವ ನಡೆದಿದೆ. ಇಂದು ಏಪ್ರಿಲ್ 3 ಗುರುವಾರದಿಂದ ಏಪ್ರಿಲ್ 7ಸೋಮವಾರದ ವರೆಗೆ ಪ್ರತಿನಿತ್ಯ ಬಲಿ, ಜಪ, ಹವನಗಳು, ಹಗಲುತ್ಸವ ತೇರು, ರಾತ್ರಿ ತಿರುಗುಣಿ ತೇರು ನಡೆಯಲಿದೆ. ಏಪ್ರಿಲ್ 7 ಸೋಮವಾರ ರಾತ್ರಿ ಶ್ರೀ ದೇವರ ಗಜ ಯಂತ್ರೋತ್ಸವ (ಹೂವಿನ ರತೋತ್ಸವ )ನಡೆಯಲಿದ್ದು, 8, ಮಂಗಳವಾರ ಶ್ರೀ ಮನ್ಮಹಾಸ್ಯoದನೋತ್ಸವ (ದೊಡ್ಡತೇರು ) ನಡೆಯಲಿದೆ. ಏಪ್ರಿಲ್ 9 ಕುಂಕುಮೋತ್ಸವ, ಏಪ್ರಿಲ್ 10 ಅವಭೃತ ತೀರ್ಥಸ್ನಾನದೊಂದಿಗೆ ಜಾತ್ರಾ ವಿಧಿ ವಿಧಾನ ಸಂಪನ್ನಗೊಳ್ಳಲಿದೆ ಎಂದು ಶ್ರೀ ದೇವಸ್ಥಾನದ ಆಡಳಿತಾಧಿಕಾರಿಗಳಾದ ಗ್ರೇಡ್ 2ತಹಸೀಲ್ದಾರ್ ರಮೇಶ ಬಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.8ರಂದು ಬನವಾಸಿ ಶ್ರೀ ಮಧುಕೇಶ್ವರ ಮಹಾರಥೋತ್ಸವ
