ಶಿರಸಿ: ನೆಮ್ಮದಿ ಕುಟೀರದಲ್ಲಿ ಸಂಗೀತ ಭೈಠಕ್ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಮೃತಾ ರಾವ್ ಬೆಂಗಳೂರು ಹಾಗೂ ಮಹಿಮಾ ಹೆಗಡೆ ಇವರ ಗಾಯನ ಹಾಗೂ ಪ್ರಜ್ವಲ್ ಹೆಗಡೆ ತಟ್ಟಿಸರ ಇವರ ಸಿತಾರ್ ಕಾರ್ಯಕ್ರಮ ನೀಡಿದರು. ಇವರಿಗೆ ಸಹಕಲಾವಿದರಾಗಿ ಸಂದೇಶ ಹೆಗಡೆ, ಆನಂದ ಭಟ್ ದಾಯೀಮನೆ, ರಚಿತ್ ಹೆಗಡೆ, ಪುಟ್ಟನಮನೆ ತಬಲ ಸಹಕಾರ ಹಾಗೂ ಭರತ್ ಹೆಗಡೆ ಹೆಬ್ಬಲಸು, ಅಂಜನಾ ಹೆಗಡೆ ಸಂವಾದಿನಿಯಲ್ಲಿ ಸಾಥ್ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಂ.ಎಂ.ಪಿ. ಹೆಗಡೆ ಪಡಿಗೆರೆ ಹಾಗೂ ಇತರ ಹಿರಿ ಕಿರಿಯ ಕಲಾವಿದರು ಉಪಸ್ಥಿತರಿದ್ದರು.
‘ಸ್ವರ ಲಯ’ ಸಂಗೀತ ಭೈಠಕ್
