Slide
Slide
Slide
previous arrow
next arrow

ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್‌ನಿಂದ ಉಚಿತ ಲಾಡು ಪ್ರಸಾದ ವಿತರಣೆ

300x250 AD

ಶಿರಸಿ: ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ಉಣ್ಣೆಮಠಗಲ್ಲಿ ಶಿರಸಿ ಇವರ ವತಿಯಿಂದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀದೇವಿಯ ದರುಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಉಚಿತವಾಗಿ ಲಾಡು ಪ್ರಸಾದವನ್ನು ವಿತರಿಸಲಾಯಿತು.

ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷರಾದ ಆರ್.ಜಿ. ನಾಯ್ಕ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಸುದೇಶ ಜೋಗಳೇಕರ್,ಎಸ್.ಪಿ.ಶೆಟ್ಟಿ,ವತ್ಸಲಾ ಹೆಗಡೆ, ತ್ರಿವೇಣಿ ವೈನ್ಸ್‌ನ ಬಾಲಕೃಷ್ಣ ವಿ.ಹೆಗಡೆ ಚಾಲನೆ ನೀಡಿದರು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಐದು ಸಾವಿರದಷ್ಟು ಲಾಡು ಪ್ರಸಾದವನ್ನು ವಿತರಿಸಲಾಯಿತು.

300x250 AD

ಟ್ರಸ್ಟ್‌ನ ಮೂಲಕ ಕಳೆದ ನಾಲ್ಕೈದು ಜಾತ್ರೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. 2022 ಮತ್ತು 2024 ರ ಶ್ರೀದೇವಿ ಮಾರಿಕಾಂಬಾ ದೇವಿಯ ಜಾತ್ರಾ ಸಂದರ್ಭದಲ್ಲಿ ಆರು ದಿನಗಳ ಕಾಲ ಸರಿ ಸುಮಾರು ಎಪ್ಪತ್ತು ಸಾವಿರ ಭಕ್ತಾದಿಗಳಿಗೆ ಉಚಿತವಾಗಿ ಭೋಜನ ಪ್ರಸಾದ ನೀಡಲಾಗಿತ್ತು. 2023ರ ಯುಗಾದಿ ಸಂದರ್ಭದಲ್ಲಿ ನಾಲ್ಕು ಸಾವಿರದಷ್ಟು ಉಚಿತ ಲಾಡು ಪ್ರಸಾದ ನೀಡಲಾಗಿತ್ತು. ಶ್ರೀಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಲಾಡು ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರವೀಣ ಜೈವಂತ-ಶೀಲಾ ಜೈವಂತ ದಂಪತಿಗಳು,ನಗರಸಭೆಯ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ- ಚಂದ್ರಶೇಖರ ಮಾದನಗೇರಿ ದಂಪತಿಗಳು, ನಗರಸಭೆಯ ಸದಸ್ಯೆ ವೀಣಾ ವಿನಾಯಕ ಶೆಟ್ಟಿ ದಂಪತಿಗಳು, ನಗರಸಭೆಯ ಕಂದಾಯ ಅಧಿಕಾರಿ ಆರ್.ಎಮ್. ವೆರ್ಣೇಕರ್ ದಂಪತಿಗಳು,ಆರ್‌ಎಫ್ಓ ಮಂಜುನಾಥ ನಾಯ್ಕ ಪ್ರತಿಭಾ ನಾಯ್ಕ ದಂಪತಿಗಳು,ನಂದಕುಮಾರ್ ಜೋಗಳೇಕರ್ ದಂಪತಿಗಳು,ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್,ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೆರಿಯಾ ಬೋರ್ಕರ್,ಪ್ರಕಾಶ ಬನವಾಸಿ,ಅನುಪ ಪಾಲೇಕರ್, ಶ್ರೀದೇವಿ ಫೈನಾನ್ಸ್‌ನ ನಾಗರಾಜ, ರಾಘವೇಂದ್ರ ಮೇಸ್ತಾ ದಂಪತಿಗಳು, ನಂದನ ಸಾಗರ, ಹುಬ್ಬಳ್ಳಿಯ ಬಿಎಸ್ಎನ್ಎಲ್ ಅಧಿಕಾರಿ‌ ಬಸವರಾಜ ಬೆಂಡಿಗೇರಿ ಹಾಗೂ ದೀಪಕ ದಂಪತಿಗಳು, ಇನ್ನೂ ಹಲವು ಗಣ್ಯರು ಪಾಲ್ಗೊಂಡರು.
ಟ್ರಸ್ಟ್ ನ ಪದಾಧಿಕಾರಿಗಳಾದ ಸತೀಶ ನಾಯ್ಕ್,ಸಚಿನ್ ಕೋಡ್ಕಣಿ,ಕೇಶವ ಪಾಲೇಕರ್,ಕಿರಣ್ ಮಡಿವಾಳ, ಶ್ರೀಪತಿ ನಾಯ್ಕ್,ಶಂಕರ ಗುಡ್ಡದಮನೆ,ದಿನೇಶ ನಾಯ್ಕ್, ಪ್ರಭಾ ಮಡಿವಾಳ,ಮಧುಕರ ನಾಯ್ಕ್, ಶ್ರೀಧರ ಹಲ್ಲುಸರಿಗೆ, ಸತ್ಯಸಾಯಿ ಸಮಿತಿಯ ಪದಾಧಿಕಾರಿಗಳು, ರಾಘು ಶೇಟ್, ಮಣಿಕಂಠ, ಮೋಹನ ರೇವಣಕರ್ ಮುಂತಾದವರು ಪಾಲ್ಗೊಂಡರು.

Share This
300x250 AD
300x250 AD
300x250 AD
Back to top