ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದಿಂದ ನಾಪತ್ತೆಯಾಗಿದ್ದ ಬಾಲಕನೋರ್ವನನ್ನು ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಮಂಗಳವಾರ ಬಾಲಕನ ಪಾಲಕರಿಗೆ ಒಪ್ಪಿಸಿದ್ದಾರೆ.
ಕೋಗಿಲಬಲದ ನಿವಾಸಿ ಅಮರ್ ಸಿಂಗ್ ಲಕ್ಷ್ಮಣ್ ಸಿಂಗ್ ಕಾಲವಾಡ ಅವರ ಮಗನಾದ 15 ವರ್ಷದ ಕುಮಾರ್ ಸಿಂಗ್ ಅಮರ್ ಸಿಂಗ್ ಎಂಬಾತನೇ ಸೋಮವಾರದಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ದೂರು ದಾಖಲಿಸಿಕೊಂಡ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಪಿಎಸ್‌ಐ ಶಿವಾನಂದ ನಾವದಗಿ ಅವರ ನೇತೃತ್ವದಲ್ಲಿ ಪೊಲೀಸರು ಶರವೇಗದಲ್ಲಿ ಬಾಲಕನನ್ನು ಪತ್ತೆ ಹಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಾಪತ್ತೆಯಾಗಿದ್ದ ಬಾಲಕ ಕುಮಾರ್ ಸಿಂಗ್ ಈತನ ತಾಯಿ ಮೃತಪಟ್ಟಿರುತ್ತಾರೆ. ಬಾಲಕನನ್ನು ತಂದೆ ಹಾಗೂ ತಂದೆಯ ಈಗಿನ ಪತ್ನಿ ತಾಯಿ ಪ್ರೀತಿಯನ್ನು ನೀಡುವ ಮೂಲಕ ತಾಯಿ ಇಲ್ಲ ಎನ್ನುವ ಕೊರಗು ಬರದಂತೆ ವಾತ್ಸಲ್ಯದಿಂದ ಬಾಲಕನನ್ನು ನೋಡಬೇಕಾದ ಜವಾಬ್ದಾರಿ ಪಾಲಕರದ್ದಾಗಿದೆ.
ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್‌ಐ ಶಿವಾನಂದ ನಾವದಗಿ ಅವರು ಬಾಲಕನಿಗೆ ಸೂಕ್ತ ರೀತಿಯ ತಿಳುವಳಿಕೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ. ಬಾಲಕನ ತಂದೆ ಅಮರ್ ಸಿಂಗ್ ಅವರಿಗೂ ತಿಳುವಳಿಕೆಯನ್ನು ನೀಡಿದ್ದಾರೆ.
ದಾಂಡೇಲಿ ಗ್ರಾಮೀಣ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಅತಿ ಶೀಘ್ರದಲ್ಲಿ ಬಾಲಕ ಪತ್ತೆಯಾಗುವ ಮೂಲಕ ಪ್ರಕರಣ ಸುಖ್ಯಾಂತ್ಯಗೊಂಡಿದೆ.