Slide
Slide
Slide
previous arrow
next arrow

ದಾಂಡೇಲಿ-ಅಂಬಿಕಾನಗರ ಬಸ್ ಸಂಚಾರ ಪ್ರಾರಂಭ: ಹೋರಾಟಕ್ಕೆ ಸಂದ ಜಯ

300x250 AD

ದಾಂಡೇಲಿ : ಕರವೇ ಸ್ವಾಭಿಮಾನಿ ಬಣದ ನಿರಂತರವಾದ ಹೋರಾಟದ ಪರಿಣಾಮವಾಗಿ ದಾಂಡೇಲಿಯಿಂದ ಅಂಬಿಕಾ ನಗರಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದೆ.

ಅಂಬಿಕಾ ನಗರ, ಕುಳಗಿ ಕಡೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ನಿಗದಿತ ಸಮಯಕ್ಕೆ ಶಾಲೆ ಕಾಲೇಜುಗಳಿಗೆ ಹೋಗಲು ಕಷ್ಟ ಸಾಧ್ಯವಾಗುತ್ತಿರುವುದನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ದಾಂಡೇಲಿಯಿಂದ ಅಂಬಿಕಾ ನಗರಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸುವಂತೆ ಸಾಕಷ್ಟು ಬಾರಿ ಸಾರಿಗೆ ಘಟಕದ ಅಧಿಕಾರಿಗಳನ್ನು ಆಗ್ರಹಿಸಿತ್ತು. ಇದರ ಹೊರತಾಗಿಯೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಅಧ್ಯಕ್ಷೆ ಪರಮೇಶ್ವರಿ ಗೊಂಡ ಅವರ ನೇತೃತ್ವದ ನಿಯೋಗ ತಹಶೀಲ್ದಾರ್ ಶೈಲೇಶ ಪರಮಾನಂದ ಅವರನ್ನು ಭೇಟಿಯಾಗಿ ಮನವಿಯನ್ನು ಮಾಡಿತ್ತು. ಆನಂತರ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷೆ ಪರಮೇಶ್ವರಿ ಗೊಂಡ, ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷೆ ರೇಷ್ಮಾ ಪ್ರದೀಪ್ ಶೆಟ್ಟಿ, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಶೈಲಾ ಸುತಾರ್, ಪದಾಧಿಕಾರಿ ಉಜ್ವಲ ಗಾವಡಾ, ಅಂಬಿಕಾನಗರ ಗ್ರಾ.ಪಂ ಸದಸ್ಯರಾದ ಮುರಳೀಧರ ಗೌಡ ಅವರ ಉಪಸ್ಥಿತಿಯಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ ಅವರೊಂದಿಗೆ ಸಭೆ ನಡೆಸಿ ಕೂಡಲೇ ದಾಂಡೇಲಿಯಿಂದ ಅಂಬಿಕಾ ನಗರಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಆಗ್ರಹಿಸಿತ್ತು. ಆ ಸಭೆಯಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ ಅವರು ದಾಂಡೇಲಿಯಿಂದ ಅಂಬಿಕಾ ನಗರಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗುವುದೆಂದು ಭರವಸೆಯನ್ನು ನೀಡಿದ್ದರು.

ಅದರಂತೆ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ್ ಅವರು ನೀಡಿದ ಭರವಸೆಯಂತೆ ದಾಂಡೇಲಿಯಿಂದ ಅಂಬಿಕಾ ನಗರಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾದಂತಾಗಿದೆ. ಒಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಹೋರಾಟಕ್ಕೆ ಸಂದ ಜಯ ಇದಾಗಿದೆ.

300x250 AD

ದಾಂಡೇಯಿಂದ ಅಂಬಿಕಾನಗರಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಿರುವುದಕ್ಕೆ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ ಅವರಿಗೆ ಹಾಗೂ ಸಮಸ್ಯೆ ಬಗೆಹರಿಸಲು ಸಹಕರಿಸಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷೆ ಪರಮೇಶ್ವರಿ ಗೊಂಡ ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top