ಸಿದ್ದಾಪುರ: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಜಿ. ಜಿ. ಹೆಗಡೆ ಬಾಳಗೋಡ ಅವರಿಗೆ ತಮಿಳುನಾಡಿನ ಏಷಿಯನ್ ಯುನಿವರ್ಸಿಟಿಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಮಾರ್ಚ್ 29 ರಂದು ನಡೆದ ಘಟಿಕೋತ್ಸವದಲ್ಲಿ ಇವರನ್ನು ಗೌರವಿಸಲಾಯಿತು. ಮಾಜಿ ಸಚಿವ ಮನೋಕಿರಣ, ನಿವೃತ್ತ ನ್ಯಾಯಮೂರ್ತಿ ಡಾ. ಹರಿದಾಸ್,ಡಾ.ಎ.ಪಿ. ಶ್ರೀನಾಥ, ಉಪ ಕುಲಪತಿ ಡಾ.ಎಸ್.ಗುಣಶೇಖರನ್ ಉಪಸ್ಥಿತರಿದ್ದರು.
ಜಿ.ಜಿ.ಹೆಗಡೆ ಬಾಳಗೋಡ್ಗೆ ಗೌರವ ಡಾಕ್ಟರೇಟ್
