ಸಿದ್ದಾಪುರ: ಧಾರವಾಡ ಜೆಎಸ್ಎಸ್ ಕಾಲೇಜಿನ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಿದ್ದಾಪುರ ತಾಲೂಕಿನ ಗಾಳೀಜಡ್ಡಿ ಸಮೀಪದ ಹುಕ್ಲಮಕ್ಕಿಯ ರಕ್ಷಿತಾ ಎಸ್. ಹೆಗಡೆ ಇವಳು ಹಾವೇರಿಯಲ್ಲಿ ಬುಧವಾರ ನಡೆದ ಅಂತರ್ ಜಿಲ್ಲಾ ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಇವಳು ಸ್ಮೀತಾ ಕುಂಟೆಮನೆ ಇವರಲ್ಲಿ ಜೂನಿಯರ್ ಸಂಗೀತಾಭ್ಯಾಸ ಮುಗಿಸಿದ್ದಾಳೆ. ಹುಕ್ಲಮಕ್ಕಿಯ ಶಶಿಧರ ಕಮಲಾಕರ ಹೆಗಡೆ ಹಾಗೂ ವಿನುತಾ ಶಶಿಧರ ಹೆಗಡೆ ದಂಪತಿ ಪುತ್ರಿ.
ಜಾನಪದ ಗೀತೆ ಸ್ಪರ್ಧೆ: ರಕ್ಷಿತಾ ಪ್ರಥಮ
