ಕುಮಟಾ: ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿನಾಯಕ ಭಟ್ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ ಇಂದ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಇವರು “ಆಪ್ಟಿಕಲ್ ಮತ್ತು ಇಲೆಕ್ಟ್ರಿಕಲ್ ಇನ್‌ವೆಸ್ಟಿಗೇಶನ್ಸ್ ಆಫ್ ಕಾಂಜುಗೇಟೆಡ್ ಪಾಲಿರ‍್ಸ್ ಮತ್ತು ಅವುಗಳ ನ್ಯಾನೋ ಕಾಂಪೋಸಿಟ್ಸ್” ಎಂಬ ಪ್ರಬಂಧವನ್ನು ಡಾ. ಎಸ್.ಬಿ.ಕಪಟ್ಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿರುತ್ತಾರೆ. ಅಲ್ಲದೇ ಎಂಟು ಸಂಶೋಧನಾ ಪ್ರಬಂಧಗಳನ್ನು ಅಂತರಾ಼ಷ್ಟ್ರೀಯ ಮಟ್ಟದ ವಿಜ್ಞಾನ ನಿಯತಕಾಲಿಕಗಳಲ್ಲಿ ಪ್ರಕಟಿಸಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.