ಹೊನ್ನಾವರ: ತಾಲೂಕಿನ ಬಳ್ಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣ್ಣಿಗೆಯಲ್ಲಿ ಕಡು ಬಡತನದಲ್ಲಿ ವಾಸಿಸುತಿದ್ದ ನಾರಾಯಣ ಅಂಬಿಗ ಅವರಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೂತನವಾಗಿ ಕಟ್ಟಿಸಿ ಕೊಟ್ಟಿರುವ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ನೂತನವಾಗಿ ನಿರ್ಮಿಸಿರುವ ವಾತ್ಸಲ್ಯ ಮನೆಯನ್ನು ನೀಲಗೋಡು ಯಕ್ಷಿ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಅನಾವರಣಗೊಳಿಸಿದರು. ನಂತರ ಮಾತನಾಡಿ ಹೆಗ್ಗಡೆಯವರ ಆರ್ಶಿವಾದಿಂದ ನಿರ್ಮಾಣವಾದ ಈ ಮನೆತುಂಬಾ ಬೆಳಕಾಗಿ ನಂದ ಗೋಕುಲವಾಗಲಿ. ಧರ್ಮಸ್ಥಳ ದೇವರ ಆರ್ಶಿವಾದದಿಂದ ಈ ಮನೆ ಬೆಳಕಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾದ ಮಹೇಶ ಎಮ್.ಡಿ ಫಲಪುಷ್ಪ ನೀಡುವ ಮುಖಾಂತರ ನಾರಾಯಣ ಜಟ್ಟಿ ಅಂಬಿಗರವರಿಗೆ ಮನೆಯನ್ನು ಹಸ್ತಾಂತರಿಸಿದರು. ನಂತರ ಮಾತನಾಡಿ ಯೋಜನೆಯ ಕಾರ್ಯಕ್ರಮದ ಜೊತೆಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಾಶಾಸನ ವಾತ್ಸಲ್ಯ ಕಿಟ್, ಜೊತೆಗೆ ವಾತ್ಸಲ್ಯ ಮನೆಯನ್ನು ನಿರ್ಮಾಣ ಮಾಡುವುದು ಹೇಮಾವತಿ ಅಮ್ಮನವರಿಗೆ ಇಷ್ಟದ ಕಾರ್ಯಕ್ರಮ, ಇದು ರಾಜ್ಯದಲ್ಲಿ 706 ನೇ ಮನೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವ 7 ನೆ ಮನೆ, ಹೊನ್ನಾವರದಲ್ಲಿ ಇದು 2 ನೇ ಮನೆ ಇದು. ಈ ಯೋಜನೆ ಆರಂಭವಾಗಿ ವರ್ಷವಾಗಿದೆ ಎಂದರು.
ಬಳ್ಕೂರ ಗ್ರಾಮ ಪಂಚಾಯತ್ ಸದಸ್ಯರುಗಳಾದ ಕೇಶವ ನಾಯ್ಕ ಬಳ್ಕೂರ ಮಾತನಾಡಿ ಇಂತಹ ಕಾರ್ಯಕ್ರಮಗಳು ಪ್ರಚಾರ ಆಗದೆ ಇದ್ದರೆ ಜನರಿಗೆ ತಿಳಿಯುವುದಿಲ್ಲ., ಸಾಲ ನೀಡುವುದರ ಜೊತೆಗೆ ನಿರ್ಗತಿಕರಿಗೆ, ಜನಸಾಮಾನ್ಯರಿಗೆ ಏನು ಮಾಡುತ್ತರೆ ಎಂದು ತಿಳಿಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಡೋಂಗಿಗಳಿಗೆ ಇಂತಹ ಕಾರ್ಯ ತಿಳಿಯಬೇಕು ಎಂದರು.
ಬಳ್ಕೂರ ಗ್ರಾಮ ಪಂಚಾಯತ ಸದಸ್ಯ ಗಣಪತಿ ನಾಯ್ಕ ಬಿಟಿ ಮಾತನಾಡಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಇದು ಒಂದು ಅತ್ಯುತ್ತಮವಾದಂತಹ ಕಾರ್ಯಕ್ರಮ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಸೌಲಭ್ಯ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಳ್ಕೂರ ಗ್ರಾಮ ಪಂಚಾಯತ್ ಸದಸ್ಯರುಗಳಾದ ಚಂದ್ರಕಲಾ ನಾಯ್ಕ, ವಿನುತಾ ಪೈ, ಜಿನ್ನೋಡ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಾಥ ಪೂಜಾರಿ, ರಾಜೇಶ್ ಪೂಜಾರಿ, ಸ್ಥಳದಾನಿ ರಾಮಚಂದ್ರ ಭಟ್ಟ, ತಾಲೂಕಿನ ಯೋಚನಾಧಿಕಾರಿ ವಾಸಂತಿ ಅಮೀನ, ವಲಯದ ಮೇಲ್ವಿಚಾರಕರಾದ ಮಾದೇವ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ವಿನಯಾ, ಮಾಗೋಡು ಶೌರ್ಯ ವಿಪತ್ತು ಘಟಕದ ಸದಸ್ಯರು, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಜರಿದ್ದರು ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಹಾಜರಿದ್ದರು.ಮನೆ ಹಸ್ತಾಂತರ ಕಾರ್ಯಕ್ರಮದ ಪೂರ್ವದಲ್ಲಿ ಗಣಹೋಮ ತುಳಸಿ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೆರಿಸಿದರು.