Slide
Slide
Slide
previous arrow
next arrow

ಹೆಗ್ಗಾರಿನಲ್ಲಿ ಅಂಚೆ ಜನಸಂಪರ್ಕ ಅಭಿಯಾನಕ್ಕೆ ಚಾಲನೆ

300x250 AD

ಅಂಕೋಲಾ: ತಾಲ್ಲೂಕಿನ ಹೆಗ್ಗಾರ ಪುನರ್ವಸತಿ ಪ್ರದೇಶದಲ್ಲಿ ಕಾರವಾರ ವಿಭಾಗದ ಅಂಚೆ ಅಧೀಕ್ಷಕರಾದ ಧನಂಜಯ ಆಚಾರ್ಯ ಮಾರ್ಗದರ್ಶನದಲ್ಲಿ ಉಪ ಅಂಚೆ ಅಧೀಕ್ಷಕರಾದ ಶಿವಾನಂದ ರಬಕವಿ ಇವರ ನೇತೃತ್ವದಲ್ಲಿ ಮಾ.24 ರಿಂದ ಹೆಗ್ಗಾರ ಅಂಚೆಕಛೇರಿಗೆ ಸಂಬಂಧಿಸಿದ ಹೆಗ್ಗಾರಿನಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಮತ್ತು ಹೊಸ ಆಧಾರ ನೋಂದಣಿ ಮತ್ತು ಅಂಚೆಯೋಜನೆಗಳ ಕಾರ್ಯಗಾರ ಪ್ರಾರಂಭವಾಗಿದ್ದು ಹಿರಿಯ ನಾಗರಿಕರಾದ ಗಣಪತಿ ಶಿವರಾಂ ಬಟ್ಟ ಇವರಿಗೆ ಆಧಾರ ತಿದ್ದುಪಡಿ ಮಾಡಿಕೊಟ್ಟ ಪ್ರತಿಯನ್ನು ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಒಂದು ವಾರಗಳ ತನಕ ಈ ಅಭಿಯಾನ ನಡೆಯಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ನಿವೃತ ನ್ಯಾಯಾಧೀಶರಾದ ನರಹರಿ ಮರಾಠೆ,ಹೆಗ್ಗಾರ ಪೋಸ್ಟ್ ಮಾಸ್ಟರ್ ಪಿವಿ ಜೋಶಿ, ಆಧಾರ್ ಅಪರೇಟರ್ ಅಮಿತ್ ಗೌಡ,ಪೋಸ್ಟ್ ಮಾಸ್ಟರ್ ನಿರಂಜನ ಆಗೇರ ಅಂಕೋಲಾ, ಅಂಚೆಇಲಾಖೆ ಅಬ್ಬಾಸ್ ಅಲಿ,ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕರ್, ಗ್ರಾಮ ಪಂಚಾಯತ ಸದಸ್ಯರಾದ ನಾರಾಯಣ ಬಟ್ಟ ಜಾಯಿಕಾಯಿ ಮನೆ,ಸಾಮಾಜಿಕ ಕಾರ್ಯಕರ್ತರಾದ ಗಣಪತಿ ನಾರಾಯಣ ಭಟ್ಟ,ಪ್ರಸನ್ನ ಗಣಪತಿ ಭಟ್ಟ, ವಿನೋದ ಗಾಂವ್ಕರ್ ಹೆಗ್ಗಾರ,ಯಮುನಾ ಗಾಂವ್ಕರ್ ಹೊಸ್ತೋಟ,ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top