ಯಲ್ಲಾಪುರ: ತಾಲೂಕಾ ಆಸ್ಪತ್ರೆ ಯಲ್ಲಾಪುರ, ಗ್ರೀನ್ ಕೇರ್ (ರಿ.) ಸಂಸ್ಥೆ ಶಿರಸಿ ಮತ್ತು ಪ್ರೇಮದ ನಕ್ಷತ್ರ ಆಶ್ರಮ ಯಲ್ಲಾಪುರ ಇವರ ಸಹಯೋಗದಲ್ಲಿ “ಹದಿಹರೆಯದ ಯುವತಿಯರಿಗೆ ವೈಯಕ್ತಿಕ ನೈರ್ಮಲ್ಯ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ವಿಶ್ವ ಗ್ಲುಕೋಮ ಸಪ್ತಹದ ಜಾಗೃತಿ” ಕಾರ್ಯಕ್ರಮವನ್ನು ಯಲ್ಲಾಪುರದ ಪ್ರೇಮದ ನಕ್ಷತ್ರ ಆಶ್ರಮದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿಗಳಾದ ಡಾ. ಸೌಮ್ಯ ಕೆ.ವಿ. ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಆಶ್ರಮದ ಹದಿಹರೆಯದ ಯುವತಿಯರಿಗೆ ವೈಯಕ್ತಿಕ ನೈರ್ಮಲ್ಯ, ಪೋಕ್ಸೋ ಕಾಯ್ದೆ ಮತ್ತು ವಿಶ್ವ ಗ್ಲುಕೋಮ ಸಪ್ತಹದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇಮದ ನಕ್ಷತ್ರ ಆಶ್ರಮದ ಮುಖ್ಯ ಅಧಿಕಾರಿಗಳಾದ ಸಿಸ್ಟರ್ ರೋಜಾ ವಹಿಸಿ ಗ್ರೀನ್ ಕೇರ್ ಸಂಸ್ಥೆಯ ಇಂತಹ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಪ್ರಶಂಸ್ಥೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ಆರ್. ಎಂ. ಮತ್ತು ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಆಶಾ ಡಿಸೋಜಾ ಅವರು ಗ್ರೀನ್ ಕೇರ್ ಸಂಸ್ಥೆಯ ಜಾಗೃತಿ ಕಾರ್ಯಕ್ರಮಗಳ ಉದ್ದೇಶದ ಬಗ್ಗೆ ತಿಳಿಸಿದರು. ಆಶ್ರಮದ ಉಸ್ತುವಾರಿಗಳಾದ ಸಿಸ್ಟರ್ ರೀಟಾ ಉಪಸ್ಥಿತರಿದ್ದರು. ಆಶ್ರಮದ ವಿದ್ಯಾರ್ಥಿಗಳಿಗೆ ಮತ್ತು ಸಿಸ್ಟರ್ಸ್ ನವರಿಗೆ ವೈದ್ಯಕೀಯ ತಪಾಸಣೆ ಮಾಡಿ ಹಿಮೋಗ್ಲೋಬಿನ್ ಪರೀಕ್ಷೆಯನ್ನು ನಡೆಸಿ ಡಾ. ಸೌಮ್ಯ ಕೆ.ವಿ. ಉತ್ತಮ ಆಹಾರ ಪದ್ಧತಿಯ ಬಗ್ಗೆ ಕಾರ್ಯಗಾರವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಸಿಬ್ಬಂದಿಗಳು ಶ್ರೀಮತಿ ಅಪ್ಸಾನಾ ಮತ್ತು ಮಹಾಂತೇಶ್ ಪ್ರಭುದೇವ್ ಉಪಸ್ಥಿತರಿದ್ದರು. ಆಶ್ರಮದ ವಿದ್ಯಾರ್ಥಿನಿಯಾದ ಸ್ನೇಹ ಸಿದ್ದಿ ಕಾರ್ಯಕ್ರಮವನ್ನು ನಿರೂಪಿಸಿ ಫಾತಿಮಾ ವಾಸ್ ವಂದಿಸಿದರು.
ಹದಿಹರೆಯದ ಯುವತಿಯರಿಗೆ ವೈಯಕ್ತಿಕ ನೈರ್ಮಲ್ಯ ಕುರಿತು ಕಾರ್ಯಕ್ರಮ
