ಶಿರಸಿ: ಕಳೆದ ಆರೆಂಟು ತಿಂಗಳಿಂದ ಪೂರ್ಣಗೊಂಡಿದ್ದರೂ ಸಹ, ಉದ್ಘಾಟನೆಗೊಳ್ಳದ ಶಿರಸಿ ನೂತನ ಬಸ್ಟ್ಯಾಂಡ್ ಗೆ ಸಂಬಂಧಿಸಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳಿಂದ ಶಿರಸಿ ಬಸ್ಟ್ಯಾಂಡ್ ಉದ್ಘಾಟನೆಗೆ ವಿಳಂಬ ಖಂಡಿಸಿ ಮತ್ತು ಶೌಚಾಲಯ, ಕುಡಿಯುವ ನೀರು ವ್ಯವಸ್ಥೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಮಾರ್ಚ್ 18, ಮಂಗಳವಾರ, ಬೆಳಿಗ್ಗೆ 11.30ಕ್ಕೆ ಬಸ್ಟ್ಯಾಂಡ್ ಎದುರು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.18ಕ್ಕೆ ಬಸ್ಸ್ಟ್ಯಾಂಡ್ ಉದ್ಘಾಟನೆ ವಿಳಂಬ ಖಂಡಿಸಿ ಪ್ರತಿಭಟನೆ
