ಶಿರಸಿ: ತಾಲೂಕಿನ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲಾ ಕಡವೆ ಸ್ಮೃತಿ ಭವನದಲ್ಲಿ ಕಾನಮುಸ್ಕಿ ಫೌಂಢೇಶನ್ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವಾನಳ್ಳಿ ಮೆಣಸಿ ಸೊಸೈಟಿ ಅಧ್ಯಕ್ಷ ಎಂ.ಎ.ಹೆಗಡೆ ಕಾನಮುಸ್ಕಿ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಎನ್.ಎಸ್.ಹೆಗಡೆ ಕೋಟಿಕೊಪ್ಪರವರು ವಾನಳ್ಳಿ ಮತ್ತು ಜಡ್ಡಿಗದ್ದೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಕರಾಗಿ ಉಪಸ್ಥಿತರಿದ್ದರು. ಸ್ಥಳೀಯ ಸಾಧಕರಾದ ಶ್ರೀಮತಿ ಅನಸೂಯಾ ಭಟ್ಟ ಗೋಪಿನಮರಿ ಮತ್ತು ಅಖಿಲಾ ಭಟ್ಟ ಬಡಗುಮನೆರವರಿಗೆ ಸ್ವಸ್ತಿ ಕ್ಲಿನಿಕ್ನ ಡಾ.ಮಂಜುಶ್ರೀ ವೆರ್ಣೆಕರ್ ಸನ್ಮಾನಿಸಿದರು. ಅಭ್ಯಾಗತರಾಗಿ ಎಂ.ಎನ್. ಭಟ್ಟ ಅರೇಕಟ್ಟಾ ಮತ್ತು ಮುಖ್ಯ ಶಿಕ್ಷಕ ರಾಘವ ಹೆಗಡೆ ಉಪಸ್ಥಿತರಿದ್ದರು. ರಾಮಕೃಷ್ಣ ಹೆಗಡೆ ಸ್ವಾಗತಿಸಿ ಕಾನಮುಸ್ಕಿ ಫೌಂಡೇಶನ್ ನಡೆದು ಬಂದ ದಾರಿ ಬಗ್ಗೆ ವಿಸ್ತೃತವಾಗಿ ವಿವರಿಸಿದರೆ, ಸತೀಶ ಹೆಗಡೆ ಮೆಣಸೀಮನೆ ಕಾರ್ಯಕ್ರಮ ನಿರ್ವಹಿಸಿದರೆ, ಸಹಶಿಕ್ಷಕ ಕೃಷ್ಣಮೂರ್ತಿ ಭಟ್ಟ ವಂದಿಸಿದರು.