ಸಿದ್ದಾಪುರ: ತಾಲೂಕಿನ ತ್ಯಾಗಲಿ ಸೊಸೈಟಿಯಲ್ಲಿ ಜು. 2, ಬುಧವಾರದಂದು ಕಾಫಿ ಕಾರ್ಯಾಗಾರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ರೈತರಿಗೆ ಪರ್ಯಾಯ ಆರ್ಥಿಕ ಬೆಳೆಗೆ ಇನ್ನೊಂದು ಆಯಾಮವಾಗಿ ಅಡಿಕೆ ತೊಟದಲ್ಲಿ ಅಡಕೆ, ಕಾಳುಮೆಣಸು, ಬಾಳೆ, ಇವುಗಳ ಜತೆ ‘ಮಿಶ್ರಬೆಳೆಯಾಗಿ ಕಾಫಿ’ ಕಾರ್ಯಾಗಾರ ತ್ಯಾಗಲಿ ಸೊಸೈಟಿಯ ಶತಸಂಪನ್ನ ಸಭಾಭವನದಲ್ಲಿ ನಾಣಿಕಟ್ಟಾದ ಅಗ್ರಗಣ್ಯ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಹಾಗೂ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಾಣಿಕಟ್ಟಾದ ಸಂಯುಕ್ತ ಆಶ್ರಯದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾರಾಯಣ ಹೆಗಡೆ ಮತ್ತೀಹಳ್ಳಿ ವಹಿಸಿದರೆ, ಮುಖ್ಯ ಅಭ್ಯಾಗತರಾಗಿ ಡಾ|| ಸುಧೀಶ ಕುಲಕರ್ಣಿ , ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಗತಿಪರ ಕೃಷಿಕರಾದ ಸೀತಾರಾಮ ಹೆಗಡೆ ನೀರ್ನಳ್ಳಿ , ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿ ಆದಿತ್ಯ ಹೆಗಡೆ , ಸಂಘದ ನಿರ್ದೇಶಕರಾದ ಎಮ್. ಆರ್. ಹೆಗಡೆ ಬಾಳೇಜಡ್ಡಿ, ಸಚ್ಚಿದಾನಂದ ಹೆಗಡೆ ಬೆಳಗದ್ದೆ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಎಮ್.ಆರ್. ಹೆಗಡೆ ಬಾಳೇಜಡ್ಡಿ ಸ್ವಾಗತ & ಪ್ರಾಸ್ತಾವಿಕ ಮಾತು ನಡೆಸಿಕೊಟ್ಟರು. ಶ್ರೀಮತಿ ರಮಾ ಗುರುನಾಥ ಹೆಗಡೆ ಶೇಲೂರು ಸ್ವಾಗತ ಪ್ರಾರ್ಥಿಸಿದರೆ, ಸಂಘದ ಇನ್ನೋರ್ವ ನಿರ್ದೇಶಕರಾದ ವಿ.ಎಮ್. ಹೆಗಡೆ ಶಿಂಗು ತ್ಯಾಗಲಿ ನಿರೂಪಣೆಯನ್ನು, ಹಾಗೂ ವಂದನಾರ್ಪಣೆಯನ್ನು ತ್ಯಾಗಲಿ ಸೋಸೈಟಿಯ ಕ್ರೀಯಾಶೀಲ ನೀರ್ದೇಶಕರಾದ ಮತ್ತು ರೈತ ಉತ್ಪಾದಕ ಸಂಘದ ಉಪಾಧ್ಯಕ್ಷರಾದ ಸಚ್ಚಿದಾನಂದ ಹೆಗಡೆ ಬೆಳಗದ್ದೆ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಸಂಘದ ಎಲ್ಲಾ ನಿರ್ದೇಶಕರುಗಳು,ತ್ಯಾಗಲಿ ಸೋಸೈಟಿಯ ಮುಖ್ಯ ಕಾರ್ಯನಿರ್ವಾಹಕರಾದ ಸುಧಾಕರ ಜಿ. ಹೆಗಡೆ ಮಾದ್ನಕಳ್ ,& ರೈತ ಉತ್ಪಾದಕ ಸಂಘದ ಸಿಇಓ ಆದ ಸಂತೋಷ ಹೆಗಡೆ ಹಾಗೂ ಆಸಕ್ತ ನೂರಕ್ಕೂ ಹೆಚ್ಚಿನ ರೈತರು, ಮತ್ತು ಎಲ್ಲಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದು ಕಾಫಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದರು. ಸಂಘವು ತನ್ನ ವ್ಯಾಪ್ತಿಯಲ್ಲಿ ರೈತರಿಗೆ ಸುಮಾರು ಐದು ಸಾವಿರದಷ್ಟು ಚಂದ್ರಗಿರಿ ಕಾಫಿ ಗಿಡಗಳನ್ನು ವಿತರಿಸಿದ್ದು ಉಲ್ಲೇಖನೀಯ ಸಂಗತಿ.