ಕುಮಟಾ: ಸ್ಥಳೀಯ ಭಾರತೀಯ ಕುಟುಂಬ ಯೋಜನಾ ಸಂಘ ಉತ್ತರಕನ್ನಡ ಶಾಖೆಯ ಪ್ರಾರಂಭಿಕ ಸದಸ್ಯರಾದ ಡಾ. ಕೆ. ಎನ್ ಬೈಲಕೇರಿ, ಅಧ್ಯಕ್ಷರಾದ ಡಾ. ಅಶೋಕ ಕೆ. ಭಟ್ ಹಳಕಾರ, ಉಪಾಧ್ಯಕ್ಷರಾದ ಡಾ. ಪ್ರೀತಿ ಪಿ. ಭಂಡಾರಕರ, ಇನ್ನಿತರ ಕೆಲವು ದೀರ್ಘಾವಧಿ ಸೇವೆ ಸಲ್ಲಿಸಿದ ಮಹನೀಯ ಸದಸ್ಯರುಗಳು ಹಾಗೂ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಸಂತಾನ ಲೂಯಿಸ್ ಇವರಿಗೆ ಕಳೆದ 10 ವರ್ಷಗಳಿಗಿಂತ ಅಧಿಕವಾಗಿ ಉತ್ತಮ ವೈದ್ಯಕೀಯ ಸೇವೆ, ಸಮಾಜ ಸೇವೆ, ಸಂಪನ್ಮೂಲ ಕ್ರೋಢೀಕರಣ ಹಾಗೂ ಇತರ ಸಾಧನೆಗಳ ಆಧಾರದ ಮೇಲೆ ಮುಂಬಯಿಯ ರಾಷ್ಟ್ರಮಟ್ಟದ ಪ್ರಧಾನ ಶಾಖೆಯು ತನ್ನ ಅಮೃತ ಮಹೋತ್ಸವದ ಸವಿನೆನಪಿಗಾಗಿ ಪ್ರಶಸ್ತಿ ಪತ್ರದೊಂದಿಗೆ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಅಲ್ಲದೇ, ಉತ್ತರಕನ್ನಡ ಶಾಖೆಯು 52 ವರ್ಷಗಳ ಸುದೀರ್ಘವಾದ ತನ್ನ ವೈದ್ಯಕೀಯ ಹಾಗೂ ಸಮಾಜ ಸೇವೆಗಾಗಿ ರಾಷ್ಟçಮಟ್ಟದ ಒಟ್ಟು 47 ಶಾಖೆಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ.
ಪುರಸ್ಕಾರ ಪಡೆದ ಇತರ ಮಹನೀಯ ಸದಸ್ಯರುಗಳೆಂದರೆ, ಡಾ.ಜಿ.ಜಿ. ಹೆಗಡೆ, ಬೀರಣ್ಣ ನಾಯಕ, ವಿಶ್ವನಾಥ್ ಐ. ಹೆಗಡೆ ಹಾಗೂ ಸಿಬ್ಬಂದಿಗಳಾದ ಜಿ. ಕೆ. ಭಟ್, ಶ್ರೀಮತಿ ಶರ್ಲೀ ಆರ್. ಪೀಟರ್, ಶ್ರೀಮತಿ. ಕಮಲಾ ಎಮ್. ಪಟಗಾರ, ಯುವಸದಸ್ಯರಾದ ಕುಮಾರಿ. ಶ್ರೀನಿಧಿ ಆರ್.ಭಟ್ ಇವರೆಲ್ಲರನ್ನು ಭಾರತೀಯ ಕುಟುಂಬ ಯೋಜನಾ ಸಂಘದ ರಾಷ್ಟ್ರಾಧ್ಯಕ್ಷರಾದ ಡಾ. ರತ್ನಮಾಲಾ ದೇಸಾಯಿ ಹಾಗೂ ನಿರ್ದೇಶಕರಾದ ನಿಶಾ ಜಗದೀಶ ಇವರು ಅಭಿನಂದಿಸಿದ್ದಾರೆ.
ಭಾರತೀಯ ಕುಟುಂಬ ಯೋಜನಾ ಸಂಘ ಉ.ಕ. ಶಾಖೆಗೆ ರಾಷ್ಟ್ರಮಟ್ಟದ ಪುರಸ್ಕಾರ
