ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾರ್ಚ್ 18, ಮಂಗಳವಾರ ಅಂಗಾರಕ ಸಂಕಷ್ಟಿ ನಿಮಿತ್ತ ಗೋಳಿ ಶ್ರೀ ಸಿದ್ಧಿವಿನಾಯಕ ದೇವರ ಸನ್ನಿಧಿಯಲ್ಲಿ 21 ಕಾಯಿಗಳ ಗಣಹವನ ಹಾಗೂ 108ಕ್ಕೆ ಕಡಿಮೆಯಾಗದಂತೆ ಶ್ರೀ ಸಿದ್ಧಿವಿನಾಯಕ ದೇವರಿಗೆ ಸಿಯಾಳದ ಅಭಿಷೇಕ ಮತ್ತು ಮಹಿಳೆಯರಿಂದ ಭಗವದ್ಗೀತೆ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಯಿಂದ ಹೊಸ್ತೋಟ ಮಂಜುನಾಥ ಭಾಗವತರು ಗೋಳಿ ಶ್ರೀ ಸಿದ್ಧಿವಿನಾಯಕ ದೇವರು ಹಾಗೂ ಶ್ರೀ ಸ್ವರ್ಣಗೌರಿ ದೇವಿಯ ಮೇಲೆ ಬರೆದಿರುವ ಭಜನೆಗಳ ಪುಸ್ತಕದ ಬಿಡುಗಡೆ ಸಮಾರಂಭ ಹಾಗೂ ಆ ಭಜನೆಗಳನ್ನು ವಿನಾಯಕ ಹೆಗಡೆ ಮುತ್ಮುರುಡು, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಗೋಳಿ, ಶ್ರೀ ಸ್ವರ್ಣಗೌರಿ ಭಜನಾ ಮಂಡಳಿ ಗೋಳಿ ಇವರಿಂದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಸ್ತುತ ಪಡಿಸಿವ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಭಜಕರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಮ್.ಎಲ್.ಹೆಗಡೆ ವಿನಂತಿಸಿದ್ದಾರೆ. ಸಿಯಾಳದ ಅಭಿಷೇಕಕ್ಕೆ ಸೀಯಾಳವನ್ನು ಕೊಡುವವರು ದಿನಾಂಕ 17/3/2025 ಸೋಮವಾರ ಮಧ್ಯಾಹ್ನದ ಒಳಗೆ ದೇವಸ್ಥಾನದ ಕಾರ್ಯಾಲಯಕ್ಕೆ ಮುಟ್ಟಿಸಬೇಕಾಗಿ ಅವರು ವಿನಂತಿಸಿದ್ದಾರೆ.
ಮಾ.18ಕ್ಕೆ ಅಂಗಾರಕ ಸಂಕಷ್ಟಿ: ಗೋಳಿಯಲ್ಲಿ ಗಣಹವನ: ಸಾಂಸ್ಕೃತಿಕ ಕಾರ್ಯಕ್ರಮ
