ಎಪಿಎಮ್‌ಸಿ ಗೋದಾಮು ಉದ್ಘಾಟನೆ: ಸಾಂಸ್ಕೃತಿಕ ಕಾರ್ಯಕ್ರಮ: ಆಲೆಮನೆ ಹಬ್ಬ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ, ಎಪಿಎಂಸಿ ಗ್ರಾಮೀಣ ಗೋದಾಮು ಕಟ್ಟಡದ ಉದ್ಘಾಟನೆ ಮಾ.8ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಹೇಳಿದರು.
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ನೂತನ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಕೃಷಿ ಸೇವಾ ಕೇಂದ್ರಕ್ಕೆ ಚಾಲನೆ ಮತ್ತು ಸಂಘದ ಲೋಗೋ ಬಿಡುಗಡೆ ಕಾರ್ಯಕ್ರಮವೂ ನಡೆಯಲಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅಂದಾಜು 96ಲಕ್ಷ ರೂಗಳಷ್ಟಾಗಿದೆ.
ಶಾಸಕ ಭೀಮಣ್ಣ ನಾಯ್ಕ ಅವರು ಅಮೃತ ಗ್ರಾಹಕರ ಮಳಿಗೆ ಮತ್ತು ಎಪಿಎಂಸಿ ಕಟ್ಟಡದ ಗ್ರಾಮೀಣ ಕೃಷಿ ಗೋದಾಮು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಕಟ್ಟಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಒಂದನೆ ಮಹಡಿ ಉದ್ಘಾಟಿಸುವರು.
ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಕೃಷಿ ಸೇವಾ ಕೇಂದ್ರ ಮತ್ತು ಸಂಘದ ಲೋಗೋ ಬಿಡುಗಡೆ ಮಾಡುವರು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವ್ಯೆದ್ಯ, ಕ್ಯಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ನಿಡಗೋಡ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ, ನಬಾರ್ಡ ಡಿಡಿಎಂ ಸುಶೀಲ ಎಲ್. ನಾಯ್ಕ, ಜಿಲ್ಲಾ ಸಹಕಾರ ಸಂಘಗಗಳ ಉಪನಿಬಂಧಕ ಜಿ.ಕೆ.ಭಟ್ಟ, ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಉಪಸ್ಥಿತರಿರುತ್ತಾರೆ. ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಅಧ್ಯಕ್ಷತೆವಹಿಸಲಿದ್ದಾರೆ.
ಸಂಜೆ 5ರಿಂದ ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿ.ಮಹಾಬಲೇಶ್ವರ ಭಟ್ಟ ಅಗ್ಗೇರೆ ವೇದಿಕೆಯಲ್ಲಿ ಮೇಧಾ ಭಟ್ಟ ಅಗ್ಗೇರೆ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದ್ದು ತಬಲಾದಲ್ಲಿ ಅಕ್ಷಯ ಭಟ್ಟ ಅಂಸಳ್ಳಿ, ಹಾರ್ಮೋನಿಯಂನಲ್ಲಿ ಅಜಯ್ ಹೆಗಡೆ ವರ್ಗಾಸರ ಹಾಗೂ ಮಂಜೀರಾದಲ್ಲಿ ಅನಂತಮೂರ್ತಿ ಭಟ್ಟ ಮತ್ತೀಘಟ್ಟ ಸಾಥ ನೀಡಲಿದ್ದಾರೆ. ಸಂಘದ ನೂತನ ಕಟ್ಟಡದ ಪ್ರಯುಕ್ತ ಮಾ.8ಹಾಗೂ 9ರಂದು ಆಲೆಮನೆ ಹಬ್ಬ ಮತ್ತು ರಿಯಾಯತಿ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಸಂಘದ ಆಡಳಿತ ಮಂಡಳಿ ನಿರ್ದೇಶಕ ಅನಂತ ಹೆಗಡೆ ಹೊಸಗದ್ದೆ ಮಾತನಾಡಿ ಸಂಘದ ಸದಸ್ಯರಿಗೆ ಅವಶ್ಯ ಇರುವ ಎಲ್ಲ ಸೌಲಭ್ಯಗಳನ್ನು ನೀಡುವ ಉದ್ದೇಶ ಸಂಘದ್ದಾಗಿದೆ. ಇಗಾಗಲೇ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಅವರ ಅವಶ್ಯಕತೆಗಳನ್ನು ಸಂಘದ ನಿಯಮಾವಳಿಯಂತೆ ನೀಡಲಾಗುತ್ತಿದೆ ಎಂದು ಹೇಳಿದರು.
ನಿರ್ದೇಶಕರಾದ ನಾಗರಾಜ ಹೆಗಡೆ ಹುಲಿಮನೆ, ವಿ.ಎಚ್.ಗೌಡ ಮಾದಲಮನೆ, ಸುಮಾ ಎಂ.ಹೆಗಡೆ ಹೊನ್ನೆಹದ್ದ, ಎಂ.ಕೆ.ನಾಯ್ಕ ತೆಂಗಿನಮನೆ ಹಾಗೂ ನಿರ್ದೇಶಕರುಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ ಕೃಷ್ಣ ಹೆಗಡೆ ಚಳ್ಳೆಹದ್ದ ಉಪಸ್ಥಿತರಿದ್ದರು.