ಹೊನ್ನಾವರ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾ-೨೦೨೫ ರ ಅಂಗವಾಗಿ ಹೊನ್ನಾವರ ತಾಲೂಕಿನ ಹೆರಂಗಡಿ, ಉಪ್ಪೋಣಿ ಮತ್ತು ನಗರದ ಪ್ರಭಾತನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ ರಾಮ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಹೆರಂಗಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆಯನ್ನ ಮುಂಜಾನೆ ೧೦ ಗಂಟೆಗೆ ಶಂಭು ಲಿಂಗೇಶ್ವರ ದೇವಾಲಯದ ಆವರಣದಲ್ಲಿ, ಮಧ್ಯಾಹ್ನ ೨-೩೦ ಕ್ಕೆ ಉಪ್ಪೋಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಭೆಯನ್ನು ಮಾರುತಿ ಚೌಡೇಶ್ವರಿ ದೇವಸ್ಥಾನ ಹೊಸ್ಕೇರಿಹೊಂಡ ಆವರಣದಲ್ಲಿ ಕಾನೂನು ಜಾಗೃತಾ ಜಾಥಾ ಸಭೆ ಜರುಗಲಿದೆ. ನಗರ ಪ್ರದೇಶದ ಅರಣ್ಯವಾಸಿಗಳ ಸಭೆಯನ್ನ ಸಾಯಂಕಾಲ ೫-೩೦ ಕ್ಕೆ ಪ್ರಭಾತನಗರದ ಅತಿಕ್ರಮಣದ ಕಾರ್ಯಾಲಯದಲ್ಲಿ ಕಾರ್ಯಾಲಯದಲ್ಲಿ ಜರುಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರಣ್ಯವಾಸಿಗಳ ಜಾಗೃತಾ ಕಾರ್ಯಕ್ರಮದಲ್ಲಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಲಿದ್ದು, ಆಸಕ್ತರು ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.