Slide
Slide
Slide
previous arrow
next arrow

ಶಿರಸಿಯಲ್ಲಿ ಡಾ. ಪಂ.ಪುಟ್ಟರಾಜ ಗವಾಯಿ ಜಯಂತ್ಯುತ್ಸವ ಆಚರಣೆ

300x250 AD

ಶಿರಸಿ: ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಗದಗ. ಇವರ ಸಹಯೋಗದಲ್ಲಿ ತಾಲೂಕಾ ಸಮಿತಿ ಶಿರಸಿ ವತಿಯಿಂದ ಮಾ.3 ಸೋಮವಾರ 3:30 ನಗರದ ನೆಮ್ಮದಿ ಕುಟೀರದಲ್ಲಿ ಡಾ. ಪಂ.ಪುಟ್ಟರಾಜರ 111 ನೇ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ಕಲೆ, ಸಾಹಿತ್ಯ, ಸಂಗೀತ ಇವೆಲ್ಲ ದೇವರು ಕೊಟ್ಟ ವರವೆಂದೆ ಹೇಳಬೇಕು. ಹಾಗೆ ಪುಟ್ಟರಾಜ ಗವಾಯಿಗಳು ತಾವು ಅಂಧರಾದರೂ ಅಂಧರಿಗೆ, ಅನಾಥರಿಗೆ. ವಿಕಲ ಚೇತನರಿಗೆ ಪುಟ್ಟರಾಜರು ಆಶಾದೀಪವಾಗಿದ್ದರು. ಅವರೆಲ್ಲರಿಗೆ ಸಂಗೀತ ಕಲಿಸಿ ಸ್ವಾವಲಂಬನೆಯ ಜೀವನಕಟ್ಟಿಕೊಟ್ಟರು. ವಿಮಲಾ ಭಾಗ್ವತ್ರವರು ಅಂತವರ ಸೇವೆಯಲ್ಲಿ ತೊಡಗಿರುವುದು ಸಂತೋಷ ಎಂದು ಉದ್ಘಾಟಕರಾದ ಕಸಾಪ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ನುಡಿದರು. ಅಥಿತಿಗಳಾದ ಡಿ.ಎಮ್.ಭಟ್ಟ ಕುಳವೆ ಅವರು ಮಾತನಾಡಿ ಪುಟ್ಟರಾಜುರವರು ಮಹಾ ಮಾನವವತಾದಿಗಳು, ಕವಿಗಳು ಒಳ್ಳೆಯ ಬರಹಗಾರರೂ ಹೌದು ಕಣ್ಣಿದ್ದವರು ಮಾಡಲಾಗದಂತ ಕೆಲಸವನ್ನು ಮಾಡಿ ಲೋಕಕ್ಕೆ ಮಾದರಿಯಾದವರು ಸರಳ ಜೀವನ ನಡೆಸಿದವರು ಎಂದು ಭಯಭಕ್ತಿಯಿಂದ ನುಡಿದರು. ವಿಮಲಾ ಭಾಗ್ವತರವರು ಮಾತನಾಡಿ ಪುಟ್ಟರಾಜರವರೊಬ್ಬ ನಡೆದಾಡೋ ದೇವರು ಅವರ ಸೇವೆಗೆ ಅವಕಾಶ ಮಾಡಿಕೊಟ್ಟ ಚೆನ್ನವೀರ ಗುರುಗಳಿಗೆ ಅಂತರಾಳದ ಧನ್ಯವಾದಗಳು ಎಂದು ಹೇಳಿ ಪುಟ್ಟರಾಜರ ಬಗ್ಗೆ ಅವರೇ ರಚಿಸಿದ ಒಂದು ವಚನವನ್ನು ಹಾಡಿದರು.

300x250 AD

ಅಧ್ಯಕ್ಷರಾದ ಡಾ. ಜಿ ಎ. ಹೆಗಡೆ ಸೋಂದಾ(ನಿವೃತ್ತ ಯುನಿವರ್ಸಿಟಿ ಡೀನ್ ಸಾಹಿತಿಗಳು ಹಾಗೂ ಯಕ್ಷಗಾನಪಂಡಿತರು )ಪುಟ್ಟರಾಜರು ಆಧ್ಯಾತ್ಮಿಕದ ಮೇರು ಪರ್ವತವೆಂದರು. ವಿಮಲಾ ಭಾಗ್ವತರು ಅವರ ಶಿಷ್ಯತ್ವದಲ್ಲಿ ದೇವರ ಸೇವೆಯಲ್ಲಿ. ಅವರ ಶ್ರೀರಕ್ಷೆ ಪಡೆದು ತುಂಬಾ ಸುಖಿಷ್ಟರು ಎಂದರು ಕರೋಕೆ ಸ್ವರಸಂಗಮ ಭೊಜರಾಜ ಶಿರಾಲಿಯವರು ಎರಡು ಭಕ್ತಿಗೀತೆ ಹಾಗೂ ಒಂದು ಪುಟ್ಟರಾಜರವರ ಹಾಡನ್ನು ಹಾಡಿದರು.
ಸಂಗೀತಾ ಒಂದು ಭಕ್ತಿಗೀತೆ ಹಾಡಿದರು ವಿಮಲಾ ಭಾಗ್ವತ್ ಒಂದು ಭಕ್ತಿಗೀತೆ ಹಾಡಿದರು ಬಂದಿರುವ ಎಲ್ಲ ಜನರು, ಗಣ್ಯರು ಡಾ.ಪಂ.ಪುಟ್ಟರಾಜರವರ ಛಾಯಾ ಚಿತ್ರಕ್ಕೆ ಪುಷ್ಪ ಹಾಕಿ ನಮಿಸಿದರು. ಶ್ರೀಮತಿ ಹೆಗಡೆಯವರು ಸುಂದರವಾಗಿ ಪ್ರಾರ್ಥನೆ ಮಾಡಿದರು .ಶ್ರೀಮತಿ ಸಾವಿತ್ರಿ ಶಾಸ್ತ್ರಿಯವರು ಸ್ವಾಗತ ಮಾಡಿ ಕವನ ವಾಚನ ಮಾಡಿದರು. ಹನುಮಂತ ಸಾಲಿಯವರು ಹಾಡು ಹಾಡಿದರು. ರಾಜು ನಾಯ್ಕ ಬಿಸಿಲಕೊಪ್ಪ ಇವರು ಪುಟ್ಟರಾಜುರವರ ಬಗ್ಗೆ ಮಾತನಾಡಿ ಸುಂದರವಾಗಿ ನಿರೂಪಣೆ ಮಾಡಿದರು. ವಿಮಲಾ ಭಾಗ್ವತ್ ವಂದಿಸಿದರು.

Share This
300x250 AD
300x250 AD
300x250 AD
Back to top