ಶಿರಸಿ: ಯಕ್ಷಾಂಕುರ ಐನಬೈಲ್ (ರಿ) ಶಿರಸಿ ಇವರು ಕಳೆದ 19 ವರ್ಷಗಳಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸಿಕೊಂಡು ಬಂದಿದ್ದು, ಪ್ರಸ್ತುತ 20 ನೇ ವರ್ಷದ ಶಿಬಿರವನ್ನು ಯುಗಾದಿ ಹಬ್ಬ ಮಾ. 30 ರಿಂದ ಏ.9 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಶಿಬಿರವು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 10 ದಿನಗಳ ಕಾಲ ನಡೆಯುತ್ತದೆ. 08 ರಿಂದ 18 ವರ್ಷದ ಗಂಡು ಅಥವಾ ಹೆಣ್ಣು ಮಕ್ಕಳು ಭಾಗವಹಿಸಬಹುದು. ಪರಮೇಶ್ವರ ಹೆಗಡೆ ಐನಬೈಲ್ ಇವರು ಯಕ್ಷಗಾನ ತರಬೇತಿಯನ್ನು ನೀಡಲಿದ್ದಾರೆ. ಶಂಕರ ನಾಗರಕಟ್ಟೆ, 1 ನೇ ಕ್ರಾಸ್, ಕೆ.ಎಚ್.ಬಿ.ಕಾಲನಿ ಶಿರಸಿ ಇವರ ಮನೆಯ ಮಹಡಿಯ ಮೇಲೆ ನಡೆಯುತ್ತದೆ. ಶಿಬಿರದ ಕೊನೆಯ ದಿನ ಏ.9, ಬುಧವಾರದಂದು ಟಿ.ಎಂ.ಎಸ್. ಸಭಾಭವನದಲ್ಲಿ ಶಿಬಿರದ ಮಕ್ಕಳಿಂದ ಯಕ್ಷಗಾನ ಪ್ರದರ್ಶನವಿರುತ್ತದೆ. ಆಸಕ್ತ ಮಕ್ಕಳ ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರಿಗೆ ಕರೆಮಾಡಬಹುದು. ಪರಮೇಶ್ವರ ಹೆಗಡೆ ಐನಬೈಲ್-Tel:+919480018915, ಸುರೇಶ ಹೆಗಡೆ ಶಿರಸಿ-Tel:+919242919300, ನಾಗೇಂದ್ರ ಭಟ್ಟ ಸಂಕದಗುಂಡಿ- Tel:+919731977906
ಮಾ.30ರಿಂದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರ
