ಶಿರಸಿ: ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ 19 ವರ್ಷಗಳಿಂದ ನಡೆದುಬಂದಿರುವ ಶಿರಸಿ ಭಾಗದ ಏಕೈಕ ಕೇಂದ್ರ ಪಠ್ಯಕ್ರಮದ ಶಾಲೆಯಾದ ಶ್ರೀನಿಕೇತನ ಶಾಲೆ, ಇಸಳೂರು ಇದರ ದ್ವಿದಶಮಾನೋತ್ಸವದ ಅಂಗವಾಗಿ ಕಟ್ಟುತ್ತಿರುವ ಕಟ್ಟಡಕ್ಕೆ ಬೆಂಗಳೂರಿನ ಮೆ|| ವೈಲ್ಯಾಂಡ್ ಮೆಟಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು ತಮ್ಮ ಕಂಪನಿಗಳ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ಇದರ ಅಡಿಯಲ್ಲಿ ರೂಪಾಯಿ 22,60,000 (ಇಪ್ಪತ್ತೆರಡು ಲಕ್ಷದ ಅರವತ್ತು ಸಾವಿರ ರೂಪಾಯಿಗಳು) ಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಈ ಸಂಸ್ಥೆಯ ಪ್ರಭಂದನಾ ನಿರ್ದೇಶಕರಾದ ನಾಗರಾಜ ಹೆಗಡೆ, ತ್ಯಾಗಲಿ ಇವರು ಈ ದೇಣಿಗೆ ಒದಗಿಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ದೇಣಿಗೆಗಾಗಿ ಶಾಲೆಯ ಅಧ್ಯಕ್ಷರು ಹಾಗೂ ಸಮಸ್ತ ಆಡಳಿತ ಮಂಡಳಿ ಸದಸ್ಯರುಗಳು ಶಿಕ್ಷಣಕ್ಷೇತ್ರದ ಬೆಳವಣಿಗೆಗೆ ಕಾಳಜಿ ತೋರಿರುವ ಮೆ|| ವೈಲ್ಯಾಂಡ್ ಮೆಟಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ನಾಗರಾಜ ಹೆಗಡೆ, ತ್ಯಾಗಲಿ ಇವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.