ದಾಂಡೇಲಿ : ಇತಿಹಾಸ ಪ್ರಸಿದ್ಧ ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯ ಜಾತ್ರೆ ಫೆ.3 ರಂದು ಆರಂಭಗೊಂಡಿದ್ದು, ಫೆ. 15ರವರೆಗೆ ನಡೆಯಲಿದೆ. ಫೆ. 13ರಂದು ಮಹಾ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಉತ್ತರ ಕರ್ನಾಟಕ ಜನತೆಯ ಆರಾಧ್ಯ ದೇವರಾದ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರನ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನ ಚಕ್ಕಡಿ ಗಾಡಿಗಳ ಮೂಲಕ ಜಾತ್ರೆಗೆ ಆಗಮಿಸುತ್ತಿರುವುದು ವಿಶೇಷ. ಅಂದಹಾಗೆ ಜಾತ್ರೆ ಆರಂಭವಾದಾಗಿನಿಂದ ಚಕ್ಕಡಿ ಗಾಡಿಗಳ ಆಗಮನ ಆರಂಭವಾಗಿದೆ. ಬುಧವಾರವೂ ಶ್ರೀ ಕ್ಷೇತ್ರ ಉಳವಿ ಜಾತ್ರೆಯ ನಿಮಿತ್ತ ಸಾಕಷ್ಟು ಸಂಖ್ಯೆಯಲ್ಲಿ ಚಕ್ಕಡಿ ಗಾಡಿಗಳು ಆಗಮಿಸಿವೆ. ದಾಂಡೇಲಿ ನಗರವನ್ನು ದಾಟಿ ಶ್ರೀ ಕ್ಷೇತ್ರ ಉಳವಿಗೆ ಹೋಗಬೇಕಾದ ಹಿನ್ನೆಲೆಯಲ್ಲಿ, ಚಕ್ಕಡಿಗಾಡಿಯಲ್ಲಿ ಬರುವಂತಹ ಭಕ್ತರು ನಗರದ ಕೋಗಿಲಬನದಲ್ಲಿರುವ ಶ್ರೀ ಮೃತ್ಯುಂಜಯ ಮಠದ ಆವರಣದಲ್ಲಿ ವಿಶ್ರಾಂತಿಯನ್ನು ಪಡೆದು ಮತ್ತೆ ಪ್ರಯಾಣವನ್ನು ಮುಂದುವರಿಸುತ್ತಾರೆ.