ಸಿದ್ದಾಪುರ: ಶ್ರೀವೇದಾಂತಗುರು ಸೋದರರಾದ ಶ್ರೀವಿಷ್ಣುತೀರ್ಥರ ಪರಂಪರೆಯಲ್ಲಿ ಬಂದ ಶ್ರೀವಾದಿರಾಜತೀರ್ಥ ಭಗವತ್ಪಾದರಕ್ಕಿಂತ ಪೂರ್ವದಲ್ಲಿ ಬಂದ ಶ್ರೀರತ್ನಗರ್ಭತೀರ್ಥರ ಶಿಷ್ಯರೇ ಶ್ರೀವೇದಾಂಗತೀರ್ಥರ ಆರಾಧನೆಯನ್ನು ಸಿದ್ದಾಪುರದ ಬಿಳಗಿಯಲ್ಲಿ ನಡೆಸಲಾಯಿತು ಎಂದು ಸೋದೆ ಮಠದ ಪ್ರಕಟನೆ ತಿಳಿಸಿದೆ.
ಶ್ರೀವಾಯುಸ್ತುತಿ ಟೀಕಾ, ಶ್ರೀಮಧ್ವವಿಜಯ ಟೀಕಾ, ಅಣು ಮಧ್ವವಿಜಯ ಟೀಕಾ, ಶ್ರೀಮದ್ಭಾಗವತ ಟೀಕಾ, ಶ್ರೀಮಹಾಭಾರತತಾತ್ಪರ್ಯ ನಿರ್ಣಯ ಟೀಕಾ, ಪಾರಿಜಾತಾಪಹರಣಂ ಟೀಕಾ, ಐತರೇಯೋಪನಿಷದ್ಭಾಷ್ಯ ಟೀಕಾ, ಭಜ ಮಧ್ವೇಶಂ ಇತ್ಯಾದಿ ಗ್ರಂಥಕಾರರಾದ ಇವರ ಆರಾಧನೆಯನ್ನು ವೃಂದಾವನಸ್ಥರಾದ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದಲ್ಲಿ ನಡೆಸಲಾಯಿತು ಎಂದು ತಿಳಿಸಲಾಗಿದೆ.