Slide
Slide
Slide
previous arrow
next arrow

ಜ.26ಕ್ಕೆ ಸುಷಿರ ಸಂಗೀತ ಮಹೋತ್ಸವ: ಸಾಧಕರಿಗೆ ಸನ್ಮಾನ

300x250 AD

ಸಿದ್ದಾಪುರ: ತಾಲ್ಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಸ್ಥಳೀಯ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಶಿರಸಿ ರಾಜದೀಪಟ್ರಸ್ಟ್ ಮತ್ತು ಸಿದ್ದಪುರದ ಧರ್ಮಶ್ರೀ ಫೌಂಡೇಶನ್‌ಇವರ ಸಹಕಾರದೊಂದಿಗೆ ಜ. 26, ಭಾನುವಾರದಂದು 23ನೇ ಸಂಗೀತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸುಷಿರ ಸಂಗೀತ ಪರಿವಾರದ ಸಂಯೋಜಕ ನಾರಾಯಣ ಹೆಗಡೆ ಕಲ್ಲಾರೆಮನೆ ಹೇಳಿದರು.

ಪಟ್ಟಣದ ಶಂಕರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಬುಧವಾರ ಅವರು ಮಾತನಾಡಿದರು. ಯುವಕಲಾವಿದರಿಗೆ ವೇದಿಕೆ ಕಲ್ಪಿಸುವ ಮತ್ತು ಭಾರತೀಯ ಸಂಗೀತ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಕಳೆದ 22ವರ್ಷಗಳಿಂದ ನಿರಂತರವಾಗಿ ಸಂಗೀತ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಂತಯೇ ಈ ವರ್ಷ ಜ.26ರಂದು ಸಂಜೆ 6ಗಂಟೆಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಸುವರ್ಣಾ ಹೆಗಡೆ ಎಮ್ಮೆನೊಂಡ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ನಿತಿನ್ ಹೆಗಡೆ ಕಲಗದ್ದೆ ತಬಲಾದಲ್ಲಿ ಮತ್ತು ಜಯರಾಂ ಭಟ್ ಹೆಗ್ಗಾರಳ್ಳಿ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
ನಂತರ 6.35ಕ್ಕೆ ನಡೆಯುವ ಸಭಾಕಾರ್ಯಕ್ರಮವನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ಲೋಕ ಶಿಕ್ಷಣ ಟ್ರಸ್ಟ್ ಸಿಇಓ ಮೋಹನ ಹೆಗಡೆ ಉದ್ಘಾಟಿಸುವರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆವಹಿಸುವರು. ನ್ಯಾಯವಾದಿ ಡಾ.ರವಿ ಹೆಗಡೆ ಹೂವಿನಮನೆ ಮತ್ತು ಶಿರಸಿ ರಾಜದೀಪ ಟ್ರಸ್ಟ್ನ ಅಧ್ಯಕ್ಷ ದೀಪಕ ದೊಡ್ಡೂರು ಉಪಸ್ಥಿತರಿರುತ್ತಾರೆ.

300x250 AD

ಸನ್ಮಾನ: ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ, ಸಾಧಕರಾದ ದೀಪಾ ರವೀಂದ್ರ ಭಟ್ಟ ಐನಕೈ ಮತ್ತು ಸಿದ್ದಾಪುರದ ನಿವೇದಿತಾ ಮಹಿಳಾ ಮಂಡಳಿಯ ಅಧ್ಯಕ್ಷೆ ಗ್ರಾಯತ್ರೀ ವೆಂಕಟ್ರಮಣ ಭಟ್ಟ ಕೊಳಗಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಎಂ. ಕೆ. ನಾಯ್ಕ ಹೊಸಳ್ಳಿ ಅಭಿನಂದನಾ ನುಡಿಗಳನ್ನಾಡುವರು.
ರಾತ್ರಿ 8ರಿಂದ ಅಂತರಾಷ್ಟ್ರೀಯ ವಾಯಲಿನ್ ವಾದಕ ರಂಜನಕುಮಾರ ಬೇವುರಾ ಭುವನೇಶ್ವರ ಇವರಿಂದ ವಾಯಲಿನ್, ಆಕಾಶವಾಣಿ ಎ ಗ್ರೇಡ್‌ಕಲಾವಿದ ಪ್ರಕಾಶ ಹೆಗಡೆ ಕಲ್ಲಾರೆಮನೆ ಇವರಿಂದ ಬಾಂಸುರಿ ಮತ್ತು ಪ್ರಸಿದ್ಧ ತಬಲಾ ವಾದಕ ರಾಜೇಂದ್ರ ನಾಕೋಡು ಬೆಂಗಳೂರು ಇವರಿಂದ ತಬಲಾ ವಾದನ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಷಿರ ಸಂಗೀತ ಪರಿವಾರದಗಿರೀಶ ಹೆಗಡೆ ಕಲ್ಲಾರೆಮನೆ, ಪ್ರಶಾಂತ ಹೆಗಡೆ ಕಾಶೀಗದ್ದೆ ಇದ್ದರು.

Share This
300x250 AD
300x250 AD
300x250 AD
Back to top