Slide
Slide
Slide
previous arrow
next arrow

ಫೆ.1ಕ್ಕೆ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇ‌ಳನ: ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ

300x250 AD

ಹೊನ್ನಾವರ: ತಾಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ೧೧ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ. ೧ ರಂದು ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಹೊನ್ನಪ್ಪಯ್ಯ ಗುನಗಾ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು, ವಿವಿಧ ಗೋಷ್ಠಿ ಮತ್ತು ಸಾದಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬೆಳಗ್ಗೆ ೧೦ ಗಂಟೆಗೆ ಸಮ್ಮೇಳನವನ್ನು ಕುಂದಾಪುರದ ಹಿರಿಯ ಸಾಹಿತಿ ಸಂಸ್ಕೃತಿ ಚಿಂತಕ ಪ್ರೊ. ಜಯರಾಮ ಶೆಟ್ಟಿ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಆಶಯನುಡಿಗಳನ್ನಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕ ದಿನಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಮುಗ್ವಾ ಗ್ರಾ.ಪಂ. ಅಧ್ಯಕ್ಷ ಐ.ವಿ.ನಾಯ್ಕ ದ್ವಾರ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಸ್.ಡಿ.ಹೆಗಡೆ ಧ್ವಜ ಹಸ್ತಾಂತರಗೊಳಿಸುವರು. ಹಿರಿಯ ಸಾಹಿತಿ ಹೊನ್ನಪ್ಪಯ್ಯ ಗುನಗಾ ಅಧ್ಯಕ್ಷೀಯ ಭಾಷಣ ಮಾಡುವರು. ಪ್ರೊ. ಕಿಶೋರ ನಾಯ್ಕ ಅವರ ಮೊಗ್ಗು' ಕವನಸಂಕಲನ, ಎನ್.ಜಿ.ಕಾವುರು ಅವರಒಂದೇ ಬನದ ಹೂಗಳು’ ಲೋಕಾರ್ಪಣೆಗೊಳ್ಳಲಿದೆ.

ಮಧ್ಯಾಹ್ನ ೧೨ ಗಂಟೆಗೆ ವಿಚಾರ ಮಂಥನ' ಗೋಷ್ಠಿಯ ನಡೆಯಲಿದೆ. ಅಂಕಣಕಾರ ನಾರಾಯಣ ಯಾಜಿ ಸಾಲಿಬೈಲು ಅಧ್ಯಕ್ಷತೆ ವಹಿಸುವರು. ಪ್ರಾಚಾರ್ಯ ವಸಂತ ಗಾಂವ್ಕರ್ ಆಶಯ ನುಡಿಯನ್ನಾಡುವರು.ಹೊನ್ನಾವರದ ಪ್ರವಾಸೋದ್ಯಮ ಹಾಗೂ ಸವಾಲುಗಳು” ಕುರಿತು ರಾಜ್ಯ ಪ್ರಶಸ್ತಿ ಪುರಸ್ಕತ ಶಿಕ್ಷಕ ಪ್ರಕಾಶ ನಾಯ್ಕ ವಿಚಾರ ಮಂಡಿಸುವರು. `ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊನ್ನಾವರದ ಕೊಡುಗೆ” ಕುರಿತು ಚಿಂತಕ ಎಲ್.ಎಂ.ಹೆಗಡೆ ವಿಚಾರ ಮಂಡಿಸುವರು. “ಹೊನ್ನಾವರದ ಪ್ರಸುತ್ತ ಸಾಹಿತ್ಯ ರಚನೆ ಗತಿ” ಕುರಿತು ಬರಹಗಾರ್ತಿ ಮಾದೇವಿ ಗೌಡ ವಿಚಾರ ಮಂಡಿಸುವರು.

    ಮಧ್ಯಾಹ್ನ ೧-೩೦ ಗಂಟೆಗೆ `ಕವಿ ಸಮಯ’ ಗೋಷ್ಠಿ ನಡೆಯಲಿದ್ದು ಸಾಹಿತಿ ಜಯಶ್ರೀ ಕಣ್ಣಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ. ಸತೀಶ ನಾಯ್ಕ ಆಶಯ ನುಡಿಯನ್ನಾಡುವರು. ಹಿರಿ ಕಿರಿಯ ಸಾಹಿತಿಗಳು ಕವನ ವಾಚಿಸುವರು. ಮಧ್ಯಾಹ್ನ ೩ ಗಂಟೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷ  ಬದುಕು ಬರಹ ಕುರಿತು ಸಾಹಿತಿ ಸಂದೀಪ ಭಟ್ ಮಾತನಾಡುವರು. ಸಂವಾದದಲ್ಲಿ ಶಿಕ್ಷಣತಜ್ಞ ಎನ್.ಎಸ್.ಹೆಗಡೆ, ಕಾಲೇಜು ಉಪನ್ಯಾಸಕ ವಿ.ಆರ್.ಭಟ್, ಬರಹಗಾರ ಶಂಕರ ಗೌಡ ಗುಣವಂತೆ ಪಾಲ್ಗೊಳ್ಳವರು.

300x250 AD

ಮಧ್ಯಾಹ್ನ ೪-೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಕಸಾಪ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಸಮಾರೋಪ ಮಾತನಾಡುವರು. ಸಾಧಕರಿಗೆ ಸನ್ಮಾನದಲ್ಲಿ ಸಾರಿಗೆ ಉದ್ಯಮಿ ವೆಂಕ್ರಟಮಣ ಹೆಗಡೆ, ಸಹಕಾರ ಕ್ಷೇತ್ರದ ಜಿ.ಜಿ.ಶಂಕರ, ರಂಗಭೂಮಿ ಕ್ಷೇತ್ರದ ರಾಮ ಗೌಡ, ಕೌಶನ್ಯ ಕ್ಷೇತ್ರದ ಅಬ್ದುಲ್ ವಹಾಬ್ ಉಸ್ಮಾನ, ಕಾಷ್ಠಶಿಲ್ಪಿ ಗಂಗಾಧರ ಆಚಾರಿ, ಜನಪದ ಹಾಡುಗಾರ್ತಿ ಗೌರಿ ನಾಯ್ಕ, ಪತ್ರಕರ್ತ ಸತೀಶ ತಾಂಡೇಲ್, ಸಾಹಿತಿ ಸುರೇಶ ನಾಯ್ಕ, ಶಿಕ್ಷಕ ವಿಷ್ಣು ಪಟಗಾರ, ಯಕ್ಷಗಾನ ನಾರಾಯಣ ಹೆಗಡೆ ಇವರನ್ನು ಸನ್ಮಾನಿಸಲಾಗುವುದು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಸುಧೀಶ ನಾಯ್ಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿಗಳಾದ ಗಜಾನನ ನಾಯ್ಕ, ಎಚ್.ಎಂ.ಮಾರುತಿ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಹಿರಿಯ ಸದಸ್ಯರಾದ ಜನಾರ್ದನ ಕಾಣಕೋಣಕರ, ಮಹೇಶ ಭಂಡಾರಿ, ಬಿ.ಎನ್.ಹೆಗಡೆ, ಸಾಧನಾ ಬರ್ಗಿ, ಆರ್.ಕೆ.ಮುಕ್ರಿ, ಕೇಶವ ಶೆಟ್ಟಿ ಇದ್ದರು.

Share This
300x250 AD
300x250 AD
300x250 AD
Back to top