ಕಾಳು ಮೆಣಸಿನ ಹಬ್ಬ–2025
ಕದಂಬ ಮಾರ್ಕೆಟಿಂಗ್
ಎಪಿಎಮ್‌ಸಿ, ಶಿರಸಿ
ದಿನಾಂಕ: ಜನವರಿ 28, 29, ಸಮಯ: ಬೆಳಿಗ್ಗೆ 10 ಗಂಟೆಯಿಂದ
ಮಹಿಳೆಯರಿಗಾಗಿ ಖಾದ್ಯ ಸ್ಪರ್ಧೆ
ನಿಯಮಾವಳಿಗಳು :-
- ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಳು ಮೆಣಸಿನ ಬಳಕೆಯಾಗಿರಬೇಕು.
- ಮನೆಯಿಂದಲೇ ಖಾದ್ಯಗಳನ್ನು ತಯಾರಿಸಿ ತರಬೇಕು.
- ಒಬ್ಬರು ಒಂದು ತಿಂಡಿಯನ್ನು ಸ್ಪರ್ಧೆಯಲ್ಲಿ ಇಡಬಹುದು.
- ಸ್ಪರ್ಧಾರ್ಥಿಗಳು ದಿನಾಂಕ 25 ಜನವರಿ 2025 ರ ಒಳಗಾಗಿ ಹೆಸರನ್ನು ನೊಂದಾಯಿಬೇಕು.
- ತಿಂಡಿಗಳನ್ನು ಪ್ರದರ್ಶನಕ್ಕಾಗಿ ಹಾಗೂ ರುಚಿಗಾಗಿ ಪ್ರತ್ಯೇಕವಾಗಿ ಕಾಯ್ದಿರಿಸಬೇಕು.
- ಕಾಳು ಮೆಣಸಿನಿಂದ ಮಾಡಿದ ಹಾಗೂ ಹೆಚ್ಚು ಕಾಲ ಬಾಳಿಕೆ ಬರುವ ಖಾದ್ಯಗಳಿಗೆ ಮೊದಲ ಪ್ರಾಶಸ್ತ್ಯ
- ಸ್ಪರ್ಧಾರ್ಥಿಗಳು ಬರುವಾಗ ತಮ್ಮೊಂದಿಗೆ ಖಾದ್ಯಗಳ ತಯಾರಿಕೆಯಲ್ಲಿ ಬಳಸಿದ ಸಾಮಗ್ರಿಗಳ ಹಾಗು ತಯಾರಿಸಿದ ವಿಧಾನದ ವಿವರಣೆಯನ್ನು ಕಡ್ಡಾಯವಾಗಿ ಒಂದು ಹಾಳೆಯಲ್ಲಿ ಬರೆದು ತರಬೇಕು.
- ಯಾವುದೇ ರೀತಿಯ ಸಂರಕ್ಷಕಗಳನ್ನು ಬಳಸುವಂತಿಲ್ಲ.
ಈ ಮೇಲಿನ ಅಂಶಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗುತ್ತದೆ.
ಸ್ಪರ್ಧೆಯ ಸಮಯ 28 ಜನವರಿ 2025 ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 11.30 ರವರೆಗೆ.
ಸ್ಪರ್ಧಾಳುಗಳು ಸ್ಪರ್ಧೆಯ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಸಕಲ ಸಿದ್ಧತೆಗಳೊಂದಿಗೆ ಹಾಜರಿರಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ ಹೆಗಡೆ : Tel:+919480622572
ಶ್ರೀವತ್ಸ ಹೆಗಡೆ : Tel:+919535502274