ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂಡಾಕುಳಿಯಲ್ಲಿ ಗರ್ಭಿಣಿ ಹಸುವಿನ ತಲೆ ಮತ್ತು ಕಾಲು ಕಡಿದು ಹತ್ಯೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ಮೇವಿಗಾಗಿ ಬಿಟ್ಟಿದ್ದರು. ಶನಿವಾರ ರಾತ್ರಿಯಾದರೂ ಹಸುವು ಮನೆಗೆ ಬರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದರು. ರವಿವಾರ ಬೆಳಿಗ್ಗೆಯೂ ಹುಡುಕಾಟ ನಡೆಸಿದಾಗ ಹಸುವಿನ ತಲೆ ಹಾಗೂ ಕಾಲನ್ನು ತುಂಡರಿಸಿ ದೇಹದ ಭಾಗ ಮಾತ್ರ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಹಸುವಿನ ಹೊಟ್ಟೆಯನ್ನು ಸೀಳಿ ಕರುವನ್ನೂ ಸಹ ಹತ್ಯೆ ಮಾಡಲಾಗಿದೆ. ಹಸುವಿನ ಮಾಲೀಕ ಕೃಷ್ಣ ಆಚಾರಿ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಲಿಸರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡಿದ್ದಾರೆ.