ಯಲ್ಲಾಪುರ: ದೈಹಿಕ ಶಿಕ್ಷಣ ಚಟುವಟಿಕೆಗಳನ್ನು ಹೆಚ್ಚೆಚ್ಚು ಸಂಘಟಿಸುವ ಮೂಲಕ ಮಕ್ಕಳ ಆರೋಗ್ಯ ಸಧೃಢತೆಯ ಬಗ್ಗೆ ಪ್ರಧಾನವಾಗಿ ಗಮನಹರಿಸಬೇಕೆಂದು ಬಿಇಒ ಎನ್.ಆರ್. ಹೆಗಡೆ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಮಂಚಿಕೇರಿ ರಾಜ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಚಿಕೇರಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ದೈಹಿಕ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನ್ನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕ ಸಧೃಢತೆಗಿಂತ ದೈಹಿಕ ಸಧೃಢತೆಯೇ ಮುಖ್ಯ ಎನ್ನುವ ಹಂತದಲ್ಲಿದ್ದೇವೆ. ದೈಹಿಕ ಕ್ಷಮತೆಯ ಬಗ್ಗೆ ನಿರ್ಲಕ್ಷ್ಯ ಸಲ್ಲ ಎಂದರು.
ದೈಹಿಕ ಶಿಕ್ಷಣ ಪರೀವೀಕ್ಷಕ ಪ್ರಕಾಶ ತಾರಿಕೊಪ್ಪ ಮಾತನ್ನಾಡಿ ದೈಹಿಕ ಶಿಕ್ಷಣ ದರ್ಶಿಕಾ ಕೈಪಿಡಿ ಹೊರತರಲು ನಿರ್ಧರಿಸಿದ್ದು, ಆನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದಿದೆ ಎಂದರು.
ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗುರುಪ್ರಸಾದ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ,ಕಾರ್ಯದರ್ಶಿ ನವೀನ ಹೆಗಡೆ,ಇಸಿಒ ಪ್ರಶಾಂತ ಜಿ.ಎನ್.,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ನಾಯ್ಕ,ಮುಖ್ಯ ಶಿಕ್ಷಕ ಲೋಕೇಶ ಗುನಗ,ಶಿಕ್ಷಕ ಸಂಘದ ಸದಸ್ಯೆ ಸುವರ್ಣಲತಾ ಪಟಗಾರ,ಸಿಆರ್ಪಿ ಗಳಾದ ಕೆ.ಆರ್. ನಾಯ್ಕ,ವಿಷ್ಣು ಭಟ್ಟ, ಭಾಗವಹಿಸಿದ್ದರು.