Slide
Slide
Slide
previous arrow
next arrow

‘ಅಧ್ಯಾತ್ಮ ಪ್ರಭೋಧ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

300x250 AD

ಶಿರಸಿ: ಸಿದ್ದಾಪುರ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಸಂತ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಜಿಯವರ “ಅಧ್ಯಾತ್ಮ ಪ್ರಭೋಧ” ಎಂಬ ನೂತನ ಮೌಲಿಕ ಗ್ರಂಥವು ಜನವರಿ 19, ರವಿವಾರ ಸಂಜೆ 4.00 ಗಂಟೆಗೆ ಶಿರಸಿಯ ಯೋಗಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಧ್ಯಾತ್ಮ ಚಿಂತಕರು, ಸಾಹಿತ್ಯಾಸಕ್ತರು ಮತ್ತು ಭಕ್ತರೆಲ್ಲ ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಂಘಟಕರು ಹಾರ್ದಿಕ ಆಹ್ವಾನ ನೀಡಿದ್ದಾರೆ.

ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಜಿಯವರ ಅಧ್ಯಾತ್ಮ ಪ್ರವಚನ ಹಾಗೂ ಸತ್ಸಂಗಗಳು ಈಗಾಗಲೇ ನಾಡಿನಾದ್ಯಂತ ಚಿರಪರಿಚಿತವಾಗಿದ್ದು, ಜನಸಾಮಾನ್ಯರಿಗೆ ದಾರಿದೀಪವಾಗಿವೆ. ಶ್ರೀಗಳ ಪ್ರವಚನಗಳಲ್ಲಿ ಕೆಲವನ್ನು ಶಿರಸಿಯ ಆಧ್ಯಾತ್ಮ ಚಿಂತಕ ಹಾಗೂ “ಜೀವನಾನಂದ” ಕೃತಿಯ ಲೇಖಕ ಬಾಲಕೃಷ್ಣ ಕಾರಂತರು ಸಮರ್ಥವಾಗಿ ಅಕ್ಷರರೂಪಕ್ಕೆ ಇಳಿಸಿದ್ದಾರೆ. ಆ ಮೌಲಿಕ ಲೇಖನಗಳ ಗುಚ್ಚ ಇದೀಗ “ಅಧ್ಯಾತ್ಮ ಪ್ರಭೋಧ” ಎಂಬ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಅವುಗಳಲ್ಲಿ ಕೆಲವು ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ವಿಶೇಷ ಲೇಖನ ಅಥವಾ ಅಂಕಣ ರೂಪದಲ್ಲಿ ಪ್ರಕಟವಾಗಿ ಓದುಗರ ಗಮನಸೆಳೆದಿರುವದನ್ನು ಇಲ್ಲಿ ಸ್ಮರಿಸಬಹುದು. ಈ ಪುಸ್ತಕದ ಪ್ರಕಟಣೆಯ ಜವಾಬ್ದಾರಿಯನ್ನು ಲೇಖಕ ಬಾಲಕೃಷ್ಣ ಕಾರಂತರ ಕುಟುಂಬ ನಿರ್ವಹಿಸಿದ್ದು, ಇದರ ಮಾರಾಟದಿಂದ ಬರುವ ಧನ ಆಶ್ರಮಕ್ಕೆ ದೇಣಿಗೆಯಾಗಿ ಸಂದಾಯವಾಗಲಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.
ಪರಮಪೂಜ್ಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ಈ ಕಾರ್ಯಕ್ರಮಕ್ಕೆ ದಿವ್ಯಸಾನ್ನಿಧ್ಯ ನೀಡಲಿದ್ದು, ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿರಸಿಯ ಪ್ರಸಿದ್ಧ ನೇತ್ರತಜ್ಞ ಡಾ. ಶಿವರಾಮ ಕೆ. ವಿ. ಘನ ಉಪಸ್ಥಿತಿ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಶ್ರೀ ಸ್ವರ್ಣವಲ್ಲೀ ಕ್ಷೇತ್ರದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಟಾನ ಹಾಗೂ ಶಿರಸಿಯ ಯೋಗಮಂದಿರ ಸಂಸ್ಥೆಗಳು ಸಹಯೋಗ ನೀಡುತ್ತಿವೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವೆಂದು ಸಂಘಟಕರಾದ ಶಿರಸಿಯ ಬ್ರಹ್ಮಾನಂದ ಸತ್ಸಂಗ ಬಳಗವು ಪತ್ರಿಕಾ ಪ್ರಕಟಣೆ ನೀಡಿದೆ.

300x250 AD
Share This
300x250 AD
300x250 AD
300x250 AD
Back to top