ಕುಮಟ: ತಾಲೂಕಾದ್ಯಂತ ಮೂರು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಅರ್ಜಿ ಪ್ರಕ್ರಿಯೆಗೆ ಕಾನೂನಾತ್ಮಕ ಆಕ್ಷೇಪ ಪತ್ರವನ್ನ ಸಲ್ಲಿಸಿ ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ ಕಾನೂನು ಭಾಹಿರ ಆಕ್ಷೇಪ ವ್ಯಕ್ತಪಡಿಸಲಾಯಿತು.
ಕುಮಟ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾದ ಕಲ್ಯಾಣಿ ಕಾಬ್ಲೆ ಅವರ ಕಛೇರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು.
ನವೆಂಬರ್ ೨೮, ೨೦೨೪ ರಂದು ಮುಖ್ಯ ಕಾರ್ಯದರ್ಶಿ ಸಮಿತಿಯು ರಾಜ್ಯಾದಂತ ವಿವಿಧ ಅರಣ್ಯ ಹಕ್ಕು ಸಮಿತಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನ ಪುನರ್ ಪರಿಶೀಲಿಸಲು ನಿರ್ದೇಶನ ನೀಡಿದ್ದು ಇರುತ್ತದೆ. ಅಪೂರ್ಣ, ಅಸ್ತಿತ್ವವಿಲ್ಲದ ಕಾನೂನು ಭಾಹಿರ ಹಕ್ಕು ಸಮಿತಿಗಳಿಂದ ಅರ್ಜಿ ಸಲ್ಲಿಸಲು ಸಮಿತಿಯಲ್ಲಿ ಶೇ.೫೦ ರಷ್ಟು ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಲು ಪ್ರಾರಂಭಿಸಿರುವದಕ್ಕೆ ಅರ್ಜಿಯಲ್ಲಿ ಆಕ್ಷೇಪದಲ್ಲಿ ಉಲ್ಲೇಖಿಸಲಾಗಿದೆ.
ಆಕ್ಷೇಪ ಪತ್ರದ ನೇತೃತ್ವವನ್ನ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಕತಗಾಲ, ಸುರೇಶ ಪಟಗಾರ, ಸೀತರಾಮ ನಾಯ್ಕ ಬುಗರಿಬೈಲ್, ಜಗದೀಶ ಹರಿಕಾಂತ, ಸಾರಾಂಬಿ ಬೆಟ್ಕುಳಿ, ಶಂಕರ ಗೌಡ, ಗಣಪತಿ ಮರಾಠಿ, ಜಯಂತ ಮರಾಠಿ, ಸುನೀತಾ ಹರಿಕಾಂತ ಕಿಮಾನಿ, ಯಾಕುಬ ಸಾಬ ಬೆಟ್ಕುಳಿ, ಗಜಾನನ ಪಟಗಾರ ಹೊಲನಗದ್ದೆ, ವೆಂಕಟರಮಣ ಪಟಗಾರ, ರಾಜೀವ ಎಮ್ ಗೌಡ ಉಪಸ್ಥಿತರಿದ್ದರು.
ಮೂರು ತಲೆಮಾರಿನ ದಾಖಲೆ ಕಾನೂನು ಭಾಹಿರ:
ಕಾನೂನು ವ್ಯತಿರಿಕ್ತವಾಗಿ ಉಚ್ಛ ನ್ಯಾಯಾಲಯದ ಮತ್ತು ಕೇಂದ್ರ ಸರ್ಕಾರದ ಆದೇಶ ನಿರ್ಲಕ್ಷಿಸಿ ಮೂರು ತಲೆಮಾರಿನ ನಿರ್ದಿಷ್ಟ ೧೯೩೦ ರ ಪೂರ್ವದ ದಾಖಲೆಗೆ ಸಾಕ್ಷ್ಯ ಒದಗಿಸಲು ಸಮಿತಿಗಳು ನೋಟೀಸ್ ನೀಡುತ್ತಿರುವದು ಕಾನೂನು ಭಾಹಿರ ಎಂದು ರಾಜ್ಯ ಅರರ್ಣಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.