ಶಿರಸಿ: ಬೆಂಗಳೂರಿನ ಸಪ್ತಕ ಸಂಸ್ಥೆ ನಗರದ ರಂಗಧಾಮದಲ್ಲಿ ಮೇ.4ರಂದು ಸಂಜೆ 5.30ಕ್ಕೆ ಸ್ವರ ಸಂಧ್ಯಾ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈಗಾಗಲೇ ಚಲನ ಚಿತ್ರ ಸಂಗೀತ, ಸುಗಮ ಸಂಗೀತ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಗಾಯಕಿ, ಪಂ ವಿನಾಯಕ ತೊರವಿ ಅವರ ಶಿಷ್ಯೆ ಶ್ರೀಲಕ್ಷ್ಮೀ ಬೆಳ್ಮಣ್ಣು ಇವರು ಶಾಸ್ತ್ರೀಯ ಗಾಯನ ಹಾಡಲಿದ್ದು, ಗುರುರಾಜ ಆಡುಕಳ ತಬಲಾದಲ್ಲಿ, ಸತೀಶ ಭಟ್ಟ ಹೆಗ್ಗಾರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಬಳಿಕ ಅಂತರ್ ರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಅನುಪಮ ಭಾಗ್ವತ್ ಅವರ ಸಿತಾರ ವಾದನಕ್ಕೆ ಶ್ರೇಷ್ಠ ಯುವ ಕಲಾವಿದ ಇಶಾನ್ ಘೋಶ್ ಮುಂಬೈ ತಬಲಾ ನುಡಿಸಲಿದ್ದಾರೆ.
ಕಲಾಸಕ್ತರಿಗೆ ಮುಕ್ತ ಪ್ರವೇಶ ಎಂದು ಸಂಘಟಕ ಸಪ್ತಕ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.