ಶಿರಸಿ: ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ಮಹಾ ರಥೋತ್ಸವ ಅಂಗವಾಗಿ ನಡೆಯುವ ಸಂಪ್ರೋಕ್ಷಣದ ಪ್ರಯುಕ್ತ ಹಟ್ಟಿಅಂಗಡಿ ಶ್ರೀಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಚಂದ್ರಹಾಸ ಚರಿತ್ರೆ ಏ.27ರ ರಾತ್ರಿ 9.30ರಿಂದ ನಡೆಯಲಿದೆ.
ಹಿಮ್ಮೇಳದಲ್ಲಿ ಶಶಾಂಕ ಬೋಡೆ, ನಾರಾಯಣ ಸಿದ್ದಾಪುರ, ವಿನಯ ಶೆಟ್ಟಿ, ಸುರೇಶ ಕಮಲಶಿಲೆ, ಮುಮ್ಮೇಳದಲ್ಲಿ ನರಸಿಂಹ ಗಾಂವಕರ, ಶಿಥಿಲ ಕುಮಾರ ಶೆಟ್ಟಿ, ತಿಲಕರಾಜ್, ಅಜಿತ ಶೆಟ್ಟಿ, ಯುವರಾಜ ಹೆಮ್ಮಾಡಿ, ಗಿರೀಶ ಮೆಕ್ಕೆಕಟ್ಟು, ಜಯರಾಮ ಕೊಠಾರಿ, ಮಾರುತಿ ನಾಯ್ಕ, ಗಣೇಶ ದೇವಡಿಗ, ರಮೇಶ ಆಡುಕಟ್ಟ, ದ್ವಿತೇಶ ಕಾಮತ್ ಇತರ ಕಲಾವಿದರು ಭಾಗವಹಿಸಲಿದ್ದಾರೆ. ಮಂಜುಗುಣಿ ಯಕ್ಷಾಭಿಮಾನಿ ಬಳಗ, ಮಂಜುಗುಣಿ ದೇವಸ್ಥಾನ ಸಹಕಾರ ನೀಡಿದೆ
ಮಂಜುಗುಣಿಯಲ್ಲಿ ಇಂದು ಯಕ್ಷಗಾನ
