Slide
Slide
Slide
previous arrow
next arrow

ಎಮ್ಇಎಸ್ ಚೈತನ್ಯ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ

300x250 AD

ಶಿರಸಿ: ಇಲ್ಲಿನ ಎಂ.ಇ.ಎಸ್. ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೆಳನವು ಕಾಲೇಜಿನ “ಕೌಮುದಿ ಸಭಾಂಗಣ” ದಲ್ಲಿ ನಡೆಯಿತು.

ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಾಮಾಜಿಕ ಕಾರ್ಯಕರ್ತರಾದ ಅನಂತಮೂರ್ತಿ ಹೆಗಡೆ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು ಎಂ.ಇ.ಎಸ್. ಚೈತನ್ಯ ಪದವಿ ಪೂರ್ವ ಕಾಲೇಜು ಶೈಕ್ಷಣಿಕ ವಲಯದಲ್ಲಿ ತನ್ನದೇ ಆದ ಖ್ಯಾತಿಯನ್ನು ಗಳಿಸಿದೆ. ಇದು ಸಂತೋಷದಾಯಕ ವಿಚಾರವಾಗಿದೆ. ಉತ್ತಮ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದರು.

300x250 AD

ಮುಖ್ಯ ಅತಿಥಿಗಳಾದ ಡಾ. ಬಾಲಚಂದ್ರ ಭಟ್‌ರವರು ಮಾತನಾಡಿ ಪ್ರತಿಭೆಯು ಮನುಷ್ಯನ ಮೂಲ ಶಕ್ತಿ. ಆ ಪ್ರತಿಭೆ ಎಲ್ಲರಲ್ಲಿಯೂ ಇದೆ. ಪ್ರತಿಭೆಯಿಂದ ಸಾಧನೆ ಸಾಧ್ಯವಿದೆ. ವಿವೇಕಾನಂದರನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಂಡು ಅಧ್ಯಯನದಲ್ಲಿ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು. ಅವರ ಚರಿತ್ರೆ ಎಲ್ಲರಗೂ ಪ್ರೇರಣಾದಾಯಕವಾಗಿದೆ ಎಂದರು.
ಎಂ. ಇ. ಎಸ್. ಚೈತನ್ಯ ಪ. ಪೂ. ಕಾಲೇಜು, ಶಿರಸಿ ಇದರ ಕಾಲೇಜು ಸಮಿತಿಯ ಅಧ್ಯಕ್ಷರಾದ ಕೆ. ಬಿ. ಲೋಕೇಶ ಹೆಗಡೆ ಮಾತನಾಡಿ ನಮ್ಮ ವಿದ್ಯಾರ್ಥಿಗಳು ನಮ್ಮ ಹೆಮ್ಮೆ. ನಮ್ಮ ಸಂಸ್ಕೃತಿಯಿಂದಲೇ ನಮ್ಮ ಗುರುಸಾಧನೆ ಸಾಧ್ಯ. ಸುಸಂಸ್ಕೃತ ವಿದ್ಯಾರ್ಥಿಗಳೇ ಉತ್ತಮ ಸಮಾಜದ ನಿರ್ಮಾಣ ಕರ್ತೃಗಳು ಎಂದರು.
ಉಪಸಮಿತಿ ಸದಸ್ಯರಾದ ಪಾಂಡುರಂಗ ಪೈರವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಎಲ್ಲರಿಗೂ ಸಂತೋಷವನ್ನು ತರುತ್ತದೆ. ವಿದ್ಯಾರ್ಥಿಗಳ ಸಾಧನೆ ನಮ್ಮ ಕಾಲೇಜಿಗೆ ಹಾಗೂ ಊರಿಗೆ ಹೆಮ್ಮೆ, ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ವಾರ್ಷಿಕ ವರದಿಯನ್ನು ವಾಚಿಸಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಭಟ್ ಹಾಗೂ ಶ್ರೀಮತಿ ಕಾಂಚನಾ ನಾಯ್ಕರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರಾಘವೆಂದ್ರ ಹೆಗಡೆಕಟ್ಟೆ ಪ್ರಾಚಾರ್ಯರು ಅತಿಥಿ ಅಭ್ಯಾಗತರನ್ನು ಪರಿಚಯಿಸಿ – ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಶಶಿಧರ ಅಬ್ಬಿ ವಂದಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.

Share This
300x250 AD
300x250 AD
300x250 AD
Back to top