Slide
Slide
Slide
previous arrow
next arrow

ಗೋಮಾತೆ ಕೆಚ್ಚಲು ಕೊಯ್ದ ಪ್ರಕರಣ; ಭಯೋತ್ಪಾದನೆಗೆ ಸಮ; ಕೋಣೆಮನೆ ವಾಗ್ದಾಳಿ

300x250 AD

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಭಯೋತ್ಪಾದಕರ ತಾಣವಾದಂತಿದೆ | ಶಿರಸಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ರಾಜ್ಯ ವಕ್ತಾರ

ಶಿರಸಿ: ಬೆಂಗಳೂರಿನ ಚಾಮರಾಜ ಪೇಟೆ ಸಾಂಸ್ಕೃತಿಕ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿತ್ತು. ಜಮೀರ್ ಖಾನ್ ಆಡಳಿತದಲ್ಲಿ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ. ಚಾಮರಾಜಪೇಟೆಯ ಗೌರಿ ಪಾಳ್ಯವು ಗೋರಿ ಪಾಳ್ಯವಾಗಿ ಬದಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಕ್ಕೆ ಹಣ ನೀಡದೇ, ಅಲ್ಪಸಂಖ್ಯಾತರ ತುಷ್ಟೀಕರಿಸಿ, ಬಹುಸಂಖ್ಯಾತರ ಭಾವನೆಯ ಜತೆ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ವಾಗ್ದಾಳಿ ನಡೆಸಿದರು.

ಸೋಮವಾರ ಅವರು ಶಿರಸಿಯ ದೀನ ದಯಾಳ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರಿನ ಹೃದಯ ಭಾಗವಾದ ಚಾಮರಾಜ ಪೇಟೆಯ ಜಮೀರ್ ಅಹಮ್ಮದ್ ಖಾನ್ ಕ್ಷೇತ್ರದಲ್ಲಿ ಭಯೋತ್ಪಾದಕ ಚಟುವಟಿಕೆ ಮೀತಿ ಮೀರುತ್ತಿದೆ. ೨ ಹಸುಗಳ ಕೆಚ್ಚಲು ಕೋಯ್ದು ರಾಕ್ಷಸಿ ಕೃತ್ಯ ಮೆರೆದಿದ್ದಾರೆ. ಆದರೆ ರಾಜ್ಯ ಸರ್ಕಾರವು ಇದೊಂದು ಮಾಮೂಲಿ ಘಟನೆ ಎಂದು ನಡೆದುಕೊಳ್ಳುತ್ತಿದೆ. ಗೌರಿ ಪಾಳ್ಯದಲ್ಲಿ ಶೇ.೯೫ ರಷ್ಟು ಮುಸ್ಲಿಂರಿದ್ದು, ಪಾದಯರಾಯಪುರ ಬಡಾವಣೆಯಲ್ಲಿಯೂ ಶೇ.೯೫ ರಷ್ಟು ಮುಸ್ಲೀಂ ಸಾಮ್ರಾಜ್ಯವಾಗಿದ್ದು, ಇರುವ ಹಿಂದೂಗಳು ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಬೇಕು ಎಂದು ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ. ಹಸುವಿನ ಕೆಚ್ಚಲು ಕೊಯ್ದ ಪ್ರಕರಣವನ್ನು ಕ್ಷುಲ್ಲಕ ಘಟನೆ ಎಂದು ಪರಿಗಣಿಸಬಾರದು. ಅಲ್ಪ ಸಂಖ್ಯಾತ ಹಿಂದೂಗಳು ಈ ಕೃತ್ಯವನ್ನು ಪಲಾಯನ ಮಾಡಬೇಕು ಎಂಬ ಬೆದರಿಕೆ ಹಾಕಲು ಈ ಕೃತ್ಯ ಮಾಡಿದ್ದಾರೆ. ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಬೇಕು. ಆದರೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

300x250 AD

ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ರಾಜ್ಯ ೧೦೬ ಗೋಶಾಲೆಗಳಿಗೆ ಅನುದಾನ ನೀಡಲಾಗಿತ್ತು. ೧೦ ದಿನ ಹಿಂದೆ ಹೊಸ ಸುತ್ತಲೆ ಹೊರಡಿಸಿ, ಗೋಶಾಲೆ ಸರ್ವೆಯಾಗಬೇಕು ಎಂದು ಹೇಳಿ ಅನುದಾನ ನಿಲ್ಲಿಸಿದ್ದಾರೆ. ಇದರ ಕುರಿತು ರಾಜ್ಯವ್ಯಾಪಿ ಹೋರಾಟದ ಆಲೋಚನೆ ಮಾಡಿದ್ದೇವೆ. ಜನಕಲ್ಯಾಣಕ್ಕೆ ಹಣ ಬಿಡುಗಡೆ ಮಾಡದೇ, ಸಾರ್ವಜನಿಕ ಕಾಮಗಾರಿಗೆ ಹಣ ಬಿಡುಗಡೆ ಮಾಡದೇ, ಅಲ್ಪ ಸಂಖ್ಯಾತರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದೆ. ನೂರಾರು ಬಾಣಂತಿಯರ ಸರಣಿ ಸಾವಾಗಿದೆ. ಬಸ್ಸಿನ ಪ್ರಯಾಣ ದರ ಏರಿಕೆ ಮಾಡಿದ್ದಾರೆ. ನೋಂದಣಿ ಮುದ್ರಾಂಕ ಇಲಾಖೆ ಸೇರಿದಂತೆ ಜನರ ಹಣ ಲೂಟಿ ಮಾಡುತ್ತಿದೆ. ಇವೆಲ್ಲವುಗಳನ್ನು ಜನರಿಗೆ ಮನದಟ್ಟು ಮಾಡಲು ೩ ಮೂರು ತಂಡ ರಚನೆ ಮಾಡಲಾಗಿದ್ದು, ರಾಜ್ಯ ಪ್ರವಾಸ ಕೈಗೊಳ್ಳಲಾಗಿದೆ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ೨ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ, ಮುಂದಿನ ಮೂರು ವರ್ಷ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಕರಾರು ಮಾಡಲಾಗಿತ್ತು. ಆದರೆ ಖುರ್ಚಿ ಬಿಟ್ಟುಕೊಡಲು ಸಿದ್ದರಾಮಯ್ಯ ತಯಾರಿಲ್ಲ. ಅಲ್ಲದೇ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಸ್ವತಃ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರು, ಮುಖಂಡರು ಬಣಗನ್ನು ಮಾಡಿಕೊಂಡು ಕಚ್ಚಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ನಿದ್ರಾ ಸ್ಥಿತಿಯಲ್ಲಿದೆ. ರಾಜ್ಯದ ಅಧಿಕಾರಿಗಳು ನಿದ್ರೆಯಲ್ಲಿದ್ದಾರೆ. ಬೆಳೆ ವಿಮೆ ಮಾಹಿತಿ ಕೇಂದ್ರ ಸರ್ಕಾರ ಕೇಳಿದಾಗ ಮಾಹಿತಿ ಒದಗಿಸಿಲ್ಲ. ಜಿಲ್ಲೆಯಲ್ಲಿ ಬಿಡುಗಡೆಯಾಗಬೇಕಿರುವ ಬೆಳೆ ವಿಮೆ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರವಾರದಲ್ಲಿ ಸಭೆ ನಡೆಸಿ, ಶೀಘ್ರ ವರದಿ ಸಲ್ಲಿಸಿ, ಎಂದು ಸೂಚನೆ ನೀಡಿದ್ದಾರೆ. ಶೀಘ್ರ ಬಿಡುಗಡೆಯಾಗಲಿದೆ. ಕೇಂದ್ರ ಸರ್ಕಾರವು ೬೦ ವರ್ಷ ಮೇಲ್ಪಟ್ಟವರಿಗೆ ೧೦ ಲಕ್ಷದ ವರೆಗೆ ವರೆಗೆ ಉಚಿತ ಚಿಕಿತ್ಸೆ ಜಾರಿಗೊಳಿಸಿದೆ. ಬಿಜೆಪಿಯೇತರ ರಾಜ್ಯದಲ್ಲಿಯೂ ಈ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ರಾಜ್ಯದಲ್ಲಿ ವಯೋವಂದನ ಆಯುಷ್ಮಾನ್ ಜಾರಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಕಡಾಕಂಡಿತವಾಗಿ ಹೇಳಿದ್ದಾರೆ. ಜನ ವಿರೋಧಿ ಸರ್ಕಾರ ಎನ್ನಲು ಇದೊಂದೆ ಸಾಕ್ಷಿ ಸಾಕು ಎಂದರು.
ಇನ್ನೂ ಶಿರಸಿ ಪ್ರತ್ಯೇಕ ಜಿಲ್ಲೆಯ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿದ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ, ಹರಿಪ್ರಕಾಶ, ಉತ್ತರಕನ್ನಡ ಅಖಂಡ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಆಡಳಿತಾತ್ಮಕ ತೀರ್ಮಾನಕ್ಕೆ ಜಿಲ್ಲೆಯ ಬಿಜೆಪಿ ಬೆಂಬಲವಿದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ಮಾತನಾಡಿ, ಜಿಲ್ಲೆಯ ಕೆಲ ಗ್ರಾಪಂನಲ್ಲಿ ಮಳೆ ದಾಖಲೀಕರಣವಾಗುತ್ತಿಲ್ಲ. ಅದರ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಪಡೆದಿಲ್ಲ. ಅಂಕಿ ಸಂಖ್ಯೆಗಳ ಸಮಸ್ಯೆಯಿಂದ ವಿಳಂಬವಾಗಿದೆ. ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ. ಆದರೂ ಬಿಡುಗಡೆಯಾಗದಿದ್ದರೆ ಬಿಜೆಪಿಯಿಂದ ಮುಂದಿನ ಹೋರಾಟದ ರೂಪು-ರೇಷೆ ಸಿದ್ಧಪಡಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಮುಂಡಗೋಡ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ಸಿದ್ದಾಪುರ ಮಂಡಲಾಧ್ಯಕ್ಷ ತಿಮ್ಮಪ್ಪ ಮಡಿವಾಳ, ಸಾಮಾಜಿಕ ಜಾಲತಾಣದ ರವಿ ಶೆಟ್ಟಿ ಮತ್ತಿತರರು ಇದ್ದರು.

ಕೋಟ್:
ದಿವಾಳಿಯಾದ ಕಾಂಗ್ರೆಸ್ ಸರ್ಕಾರ ಶಿರಸಿಯ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ಹಾಳು ಮಾಡಲು ಹೋರಟಿದೆ. ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕು.
— ಹರಿಪ್ರಕಾಶ ಕೋಣೆಮನೆ, ಬಿಜೆಪಿ ರಾಜ್ಯ ವಕ್ತಾರ

Share This
300x250 AD
300x250 AD
300x250 AD
Back to top