ಶಿರಸಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಅಮಾಯಕರಿಗೆ ಶೃದ್ಧಾಂಜಲಿ ಸಲ್ಲಿಸಿ ಹಾಗೂ ಇದಕ್ಕೆ ತಕ್ಕ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ಸೈನ್ಯ ಹಾಗೂ ಭಾರತ ಸರಕಾರಕ್ಕೆ ಬಲ ಬರಲೆಂಬ ಸಂಕಲ್ಪದೊಂದಿಗೆ ನಿರಂತರ 7 ದಿನಗಳ ಕಾಲ ಅಗ್ನಿ ದೇವರಿಗೆ ಸಮಿತ್ತು ಅರ್ಪಣೆ ಕಾರ್ಯಕ್ರಮವನ್ನು ತಾಲೂಕಿನ ತಾರಗೋಡಿನ ಶ್ರೀ ಕ್ಷೇತ್ರಪಾಲ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಇಂದು ಏ.27ರಂದು ಬೆಳಿಗ್ಗೆ 10.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ನಿರಂತರ 7 ದಿನಗಳ ಕಾಲ ನಿರಂತರ 7 ದಿನಗಳಲ್ಲಿ ಯಾವುದೇ ಸಮಯದಲ್ಲಿ ಬಂದು ಸಮಿತ್ತುಗಳ ಅರ್ಪಣೆ ಮಾಡಬಹುದು. ಅರ್ಪಣೆಗೆ ತುಪ್ಪ, ಅಶ್ವತ್ಥ, ಖೈರ, ಉತ್ತರಣೆ, ಅತ್ತಿ, ಮುತಕಲು, ಶಮಿ, ಎಕ್ಕೆ ಸಮಿತ್ತುಗಳನ್ನು ಬಳಸಲಾಗುವುದು.