ಯಲ್ಲಾಪುರ: ಚಿಪಗೇರಿಯ ಶ್ರೀರಾಮ ವನವಾಸಿ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಕಾರ್ಯಕ್ರಮವು ಜ.11, ಶನಿವಾರದಂದು ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯ ಆವರಣದಲ್ಲಿ ಆಯೋಜನೆಗೊಂಡಿದೆ.
ಕಾರ್ಯಕ್ರಮವನ್ನು , ವಿ.ಪ್ರಾ.ಗ್ರಾ. ಸೊಸೈಟಿ, ಭರತನಹಳ್ಳಿ ಅಧ್ಯಕ್ಷ ಹೇರಂಭ ಹೆಗಡೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಮಂಜುನಾಥ ಶಾಸ್ತ್ರೀ ವಹಿಸಲಿದ್ದಾರೆ. ಈವೇಳೆ ಕಲಾವಿದ ಬೆಳ್ಳು ಗೌಡ, ಸರ್ನಗದ್ದೆ ಹಾಗೂ ಮುಖ್ಯ ಅತಿಥಿಗಳಾಗಿ ಮುಂಡಗೋಡಿನ ಉದ್ಯಮಿ ಶ್ರೀಮತಿ ರೇಖಾ ಅಂಡಗಿ, ಶಿಕ್ಷಣ ಸಂಯೋಜಕ ಪಾಂಡುರಂಗ ಟಿಕ್ಕೋಜಿ, ಕೃಷಿಕ ರಾಮಚಂದ್ರ ಜಿ. ಹೆಗಡೆ, ಉಚಗೇರಿ, ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಮಜ್ಜಿಗೆಹಳ್ಳ ಧನಗರ ಗೌಳಿ ಸಮುದಾಯದ ಮೊದಲ ಲೆಕ್ಕ ಪರಿಶೋಧಕ (CA) ಬಾಗು ಕಾಳು ಡೋಯಿಪಡೆ, ಸಹಕಾರಿ ಸನ್ಮಾನಿತೆ ಶ್ರೀಮತಿ ಪಾರ್ವತಿ ಸಣ್ಯಾ ಸಿದ್ಧಿ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಉತ್ತರ ಪ್ರಾಂತದ ಸಹ ಸೇವಾ ಪ್ರಮುಖ ಡಾ|| ಸುರೇಶ್ ಹೆಗಡೆ, ಕುಮಟಾ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ನಿಲಯದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.