ಜೋಯಿಡಾ: ತಾಲೂಕಿನ ಸರಕಾರಿ ಕನ್ನಡ ಶಾಲೆ ಸಿದ್ದೋಲಿಗೆ ಸೋಮವಾರದಂದು ಬೆಂಗಳೂರಿನ HEL ಸಹದ್ಯೋಗಿಗಳಾದ ಮಂಜುನಾಥ, ಸ್ವಾಮಿ, ನವಾಬ್, ಬಸಪ್ಪ, ಭಾಸ್ಕರ್ ಇವರನ್ನು ಒಳಗೊಂಡ ಅಳಿಲು ಸೇವಾ ಕೂಟ ತಂಡದವರು ಆಗಮಿಸಿ ಗ್ರೀನ್ ಬೋರ್ಡ್,ಪ್ಯಾನೆಲ್ ಬೋರ್ಡ್,ವಾಟರ್ ಫಿಲ್ಟರ್,ಗ್ಯಾಸ್ ಸ್ಟವ್,ಸ್ಮಾಲ್ ಗ್ರೀನ್ ಬೋರ್ಡ್ಸ್, ವೈಹಿಂಗ್ ಮಶೀನ್,ಬುಕ್ ಟ್ರಾಲಿ,10ಲೀಟರ್ ಕುಕ್ಕರ್ ಜೊತೆಗೆ ಮಕ್ಕಳಿಗೆ ರಿವ್ರೈಟ್ ಬುಕ್ಸ್ ,ಸ್ಪೋರ್ಟ್ಸ್ ಐಟಮ್ಸ್ ,ಇನ್ನಿತರ ಕಲಿಕಾ ಸಾಮಗ್ರಿಗಳನ್ನು ನೀಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಳಿಲು ಸೇವಾ ಕೂಟ ತಂಡದ ಸರ್ವ ಸದಸ್ಯರಿಗೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ, ಆತ್ಮೀಯ ಶಿಕ್ಷಕರುಗಳಾದ ಪಕೀರಪ್ಪ, ಶಾಂತಕುಮಾರ್ ಕೆ.ಎಸ್.ವಿನಾಯಕ ಪಟಗಾರ,ಶಿವಾಜಿ ಶಿಂದೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಸಿದ್ದೋಲಿ ಶಾಲೆಯ ಶಿಕ್ಷಕರಾದ ಹನುಮಂತಪ್ಪ ಹೆಚ್, ಎಸ್‌ಡಿಎಮ್‌ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಾಲಕರು, ಪೋಷಕರು,ವಿಧ್ಯಾರ್ಥಿಗಳು,ಸಮಸ್ತ ಗ್ರಾಮಸ್ಥರು ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.