ಹೊನ್ನಾವರ: ತಾಲೂಕಿನ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಜಾನನ ದೇವಿದಾಸ ನಾಯ್ಕ, ಉಪಾಧ್ಯಕ್ಷರಾಗಿ ದತ್ತಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
೧೨ ಸದಸ್ಯರ ಬಲವನ್ನು ಹೊಂದಿದ್ದ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ನಿರ್ದೆಶಕರಾಗಿ ಆಯ್ಕೆಯಾಗಿದ್ದ ಗಜಾನನ ದೇವಿದಾಸ ನಾಯ್ಕ ಮತ್ತು ದತ್ತಾ ನಾಯ್ಕ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯು ಬುಧವಾರ ಬ್ಯಾಂಕಿನ ಕಾರ್ಯಾಲಯದಲ್ಲಿ ಜರುಗಿತು.
೧೨ ನೂತನ ಸದಸ್ಯರಲ್ಲಿ ೧೧ ಸದಸ್ಯರು ಮಾತ್ರ ಆಗಮಿಸಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಾಲ್ಗೊಂಡು ಅಧ್ಯಕ್ಷ ಸ್ಥಾನಕ್ಕೆ ಗಜಾನನ ದೇವಿದಾಸ ನಾಯ್ಕ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದತ್ತಾ ಮಾಬ್ಲೇಶ್ವರ ನಾಯ್ಕ ನಾಮಪತ್ರ ಸಲ್ಲಿಸಿದರು. ಇನ್ನುಳಿದ ಯಾವುದೆ ಸದಸ್ಯರು ನಾಮಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಶ್ರೀದೇವಿ ಕಟ್ಟಿಮನಿ ಯವರು ಅದ್ಯಕ್ಷರಾಗಿ ಗಜಾನನ ದೇವಿದಾಸ ನಾಯ್ಕ ಉಪಾಧ್ಯಕ್ಷರಾಗಿ ದತ್ತಾ ಮಾಬ್ಲೇಶ್ವರ ನಾಯ್ಕ ಅವರ ಹೆಸರನ್ನು ಘೋಷಣೆ ಮಾಡಿದರು. ಚುನಾವಣಾ ಪ್ರಕ್ರೀಯೆ ಸಹಕಾರ ಅಭಿವೃದ್ದಿ ಅಧಿಕಾರಿ ಕಾರವಾರದ ಶ್ರೀದೇವಿ ಕಟ್ಟಿಮನಿ ಮತ್ತು ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಾಹಕರಾದ ಶ್ರೀಧರ ಎಮ್ ನಾಯ್ಕ ಅವರ ನೇತ್ರತ್ವದಲ್ಲಿ ನಡೆಯಿತು.
ಮುಖಂಡರಾದ ವಾಮನ ನಾಯ್ಕ, ರಘುವೀರ ಪ್ರಭು, ಆನಂದ ನಾಯ್ಕ, ಗಣಪತಿ ನಾಯ್ಕ, ನಾಗರಾಜ ನಾಯ್ಕ, ಉದಯ ನಾಯ್ಕ, ರಾಜು ನಾಯ್ಕ, ಗೋವಿಂದ ನಾಯ್ಕ, ವಿಷ್ಣು ನಾಯ್ಕ, ಉಷಾ ನಾಯ್ಕ, ಮಮತಾ ನಾಯ್ಕ ಸೇರಿದಂತೆ ಮುಂತಾದವರು ಆಗಮಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಕೋರಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಜಾನನ ದೇವಿದಾಸ ನಾಯ್ಕ ಮಾತನಾಡಿ ವ್ಯವಸಾಯ ಸೇವಾ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಮಾಡುವಲ್ಲಿ ಸಹಕರಿಸಿದ ಸಚಿವರಾದ ಮಂಕಾಳ ವೈದ್ಯ ಅವರಿಗೆ, ಷೇರು ಸದಸ್ಯರಿಗೆ ನೂತನ ನಿರ್ದೇಶಕರುಗಳಿಗೆ, ಹಿತೈಷಿಗಳಿಗೆ ಉರ ನಾಗರಿಕರಿಗೆ ಧನ್ಯವಾದಗಳು, ಮುಂದಿನ ೫ ವರ್ಷ ಅವದಿಯಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತೆನೆ ಎಂದರು.
ಈ ಸಂದರ್ಭದಲ್ಲಿ ನೂತನ ನಿರ್ದೆಶಕರಾದ ಚಂದ್ರಶೇಖರ ನಾಯ್ಕ, ಮಂಜುನಾಥ ನಾಯ್ಕ, ವೆಂಕಟೇಶ ನಾಯ್ಕ, ಸತೀಶ ನಾಯ್ಕ, ಮಂಜುನಾಥ ಹಳ್ಳೆರ, ರೂಪಾ ಹಸ್ಲರ್, ಆಂಡ್ರು ಫರ್ನಾಂಡಿಸ್, ಲತಾ ನಾಯ್ಕ, ಶ್ಯಾಮಲಾ ನಾಯ್ಕ, ಇದ್ದರು