ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ರಾಜ್ಯಮಟ್ಟದ ಹವ್ಯಕ ಕ್ರೀಡಾಹಬ್ಬ ಕಳಚೆ ಪ್ರೀಮಿಯರ್ ಲೀಗ್ (KPL) ಸೀಸನ್ 5 ಮತ್ತು ಬಿಗ್ 4 ಲೀಗ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ಈ ಬಾರಿ ಕೆಪಿಲ್‌ನಲ್ಲಿ 16 ಮತ್ತು ಬಿಗ್ 4 ಲೀಗ್‌ನಲ್ಲಿ 14 ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜ್ಯದ ನಾನಾ ಕಡೆಯಿಂದ 200ಕ್ಕೂ ಹೆಚ್ಚು ಕ್ರೀಡಾ ಪಟುಗಳು 3 ದಿನಗಳ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಟೀಮ್ ವಿಭಾ ಹಳವಳ್ಳಿ ಕೆಪಿಎಲ್ ಹಾಗೂ ಬಿಗ್ 4 ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿತು. ಬಿಗ್ 4 ನಲ್ಲಿ ಟೀಮ್ ಪಾಂಚಜನ್ಯ ಹಾಗೂ ಕೆಪಿಎಲ್ ನಲ್ಲಿ ಕ್ರಿಕೆಟ್ ಲವರ್ಸ್ ಈರಾಪುರ ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿತು. 30 ವರ್ಷದ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಪ್ರಮೋದ ಹೆಬ್ಬಾರ್ ಮತ್ತು ಶ್ರೀನಾಥ ಹೆಗಡೆ ಕೇರಿ ಇವರಿಗೆ ‘ಐಕಾನ್ ಪ್ಲೇಯರ್ ಒಫ್ ಕಳಚೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಪಿಎಲ್ ಸಂಘಟನೆ ಮಾದರಿ:
ಕಳೆದ 5 ವರ್ಷಗಳ ಹಿಂದಿನ ಕೋವಿಡ್ ಸಂದರ್ಭದಲ್ಲಿ, ಸಣ್ಣಮಟ್ಟದಲ್ಲಿ ಹುಟ್ಟಿಕೊಂಡ ಈ ಕೆಪಿಎಲ್ ಪಂದ್ಯಾವಳಿ ಇದೀಗ ರಾಜ್ಯಮಟ್ಟಕ್ಕೆ ವಿಸ್ತರಿಸಿಕೊಂಡಿದೆ. ಕಳಚೆಯ ಉತ್ಸಾಹಿ ಸಂಘಟಕರು ಹವ್ಯಕರಿಗಾಗಿ ಏರ್ಪಡಿಸುವ ಈ ಪಂದ್ಯಾವಳಿ, ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗುತ್ತ ಸಾಗಿದೆ. ಕೆಪಿಎಲ್ ಪಂದ್ಯಾವಳಿಯನ್ನು ಮಾದರಿಯಾಗಿ ಸಂಘಟಿಸುವ ಕಳಚೆ ಗ್ರಾಮಸ್ಥರು, ಹಬ್ಬದಂತೆ ಆಚರಿಸುವುದು ವಿಶೇಷವಾಗಿದೆ.