ಸಿದ್ದಾಪುರ: ತಾಲೂಕಿನ ತಾರೇಹಳ್ಳಿ ಕಾನಸೂರ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆಯ ಸಭೆಯು ಜ.3ರಂದು ನಡೆಯಿತು.
ಮುಂದಿನ 5 ವರ್ಷಗಳ ಅವಧಿಗೆ ಸಂಘದ ಅಧ್ಯಕ್ಷರನ್ನಾಗಿ ಗುರುನಾಥ ಗೋಪಾಲಕೃಷ್ಣ ಹೆಗಡೆ ದೇವಿಸರ ಹಾಗೂ ಉಪಾಧ್ಯಕ್ಷರನ್ನಾಗಿ ಹರಿನಾರಾಯಣ ಗಣಪತಿ ಭಟ್ಟ ಜಿಗಳೇಮನೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಿಟರ್ನಿಂಗ್ ಅಧಿಕಾರಿಗಳಾದ ರಾಘವೇಂದ್ರ ಎಲ್. ಗುಡಿಕೇರಿ ಸಹಕಾರ ಅಭಿವೃದ್ಧಿ ಅಧಿಕಾರಿ ಸಿದ್ದಾಪುರ (ಉ.ಕ) ಇವರು ಹಾಜರಿದ್ದು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು . ಈ ಸಂದರ್ಭದಲ್ಲಿ ಆಯ್ಕೆಯಾದ ಎಲ್ಲಾ ನಿರ್ದೇಶಕರುಗಳು ಸಭೆಯಲ್ಲಿ ಹಾಜರಿದ್ದರು.