ಶಿರಸಿ: ಪ್ರಶಾಂತಿ ಫೌಂಡೇಶನ್, ಶಿರಸಿ ಹಾಗೂ ದಿ ಅಸೋಸಿಯೇಶನ್ ಆಫ್ ಫೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಸಮಗ್ರ ಪುನರ್ವಸತಿ ಕೇಂದ್ರವನ್ನು ನಗರದ ಯಲ್ಲಾಪುರ ನಾಕಾದಲ್ಲಿರುವ 3ನೇ ನಂಬರ್ ಕನ್ನಡ ಶಾಲೆಯಲ್ಲಿ ತೆರೆಯಲಾಗುತ್ತಿದೆ.
0 ದಿಂದ 8 ವರ್ಷದ ಮಕ್ಕಳಲ್ಲಿ ಅಂಗವಿಕಲತೆಯನ್ನು ಗುರುತಿಸಿ, ಅವರಿಗೆ ಅವಶ್ಯವಿರುವ ಯೋಜನೆಯನ್ನು ರೂಪಿಸುವ (early intervention) ಕಾರ್ಯವನ್ನು ಶಿರಸಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯಲ್ಲಿ ಸುಮಾರು 115 ಫಲಾನುಭವಿಗಳು ಗುರುತಿಸಲ್ಪಟ್ಟಿದ್ದು, ಅವರಿಗೆ ಅಗತ್ಯವಿರುವ ಸೇವೆಗಳನ್ನು ಹಳ್ಳಿಗಳ ಮಟ್ಟದಲ್ಲಿ ನೀಡಲಾಗುತ್ತಿದೆ. ಸಂಪೂರ್ಣ ತರಬೇತಿ ಹಾಗೂ ನಿರಂತರ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿರಸಿಯಲ್ಲಿ ಸಮಗ್ರ ಪುನರ್ವಸತಿ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಇಂದು ಜ.4ರಂದು ಬೆಳಿಗ್ಗೆ 10ಗಂಟೆಗೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.