ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನ ಕಾರ‍್ಯಕ್ರಮವನ್ನು ಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ಸರ್ಕಲ್ ಶಿರಸಿ ಕಛೇರಿಯಲ್ಲಿ ಸಂಘಟಿಸಿ ಹೋರಾಟಗಾರರ ವೇದಿಕೆಗೆ ಲಿಖಿತ ಪತ್ರ ಮೂಲಕ ಅರಣ್ಯ ಸಂರಕ್ಷಣಾಧಿಕಾರಿಯವರು ತಿಳಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನ ಸ್ಪಂದಿಸುವ ಹಿನ್ನಲೆಯಲ್ಲಿ ಚರ್ಚೆಯ ಸಭೆ ಸಂಘಟಿಸಬೇಕೆಂಬ ಹೋರಾಟಗಾರರ ಮನವಿ ಮೇರೆಗೆ ಅರಣ್ಯ ಸಂರಕ್ಷಕಾಧಿಕಾರಿಗಳು ಸಭೆ ಸಂಘಟಿಸಿದ್ದಾರೆಂದು ಪ್ರಕಟಣೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಅರಣ್ಯವಾಸಿಗಳೊಂದಿಗೆ ಸೌಹಾರ್ಧಿತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮತ್ತು ಅರಣ್ಯವಾಸಿಗಳ ಮೇಲೆ ಜರುಗುತ್ತಿರುವ ದೌರ್ಜನ್ಯ, ಕಿರುಕುಳ ಹಿರಿಯ ಅಧಿಕಾರಿಯೊಂದಿಗೆ ಸಮಾಲೋಚಿಸುವ ಉದ್ದೇಶದಿಂದ ಚರ್ಚೆಯ ಸಭೆ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಭೆಯ ಹಾಜರಿಗೆ ಮುಕ್ತ ಅವಕಾಶಕ್ಕೆ ಆಗ್ರಹ:
ಅರಣ್ಯ ಸಂರಕ್ಷಣಾಧಿಕಾರಿಗಳು ಜ:9ರ ಸಭೆಗೆ ಚರ್ಚಿಸಲು ಹೋರಾಟಗಾರರ ವೇದಿಕೆಯಿಂದ ಹತ್ತು ಜನ ಸಾರ್ವಜನಿಕರಿಗೆ ಮಾತ್ರ ಹಾಜರಿರಲು ತಿಳಿಸಿರುವುದು ಖೇದಕರ ಸಭೆಗೆ, ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ನಿರ್ಣಾಯಕ ಹಂತದಲ್ಲಿ ಚರ್ಚಿಸಲು ಬಯಸಿರುವುದರಿಂದ ಜಿಲ್ಲೆಯ ೧೨ ತಾಲೂಕಿನ ಪ್ರತಿನಿಧಿಗಳು,ಗ್ರೀನ್ ಕಾರ್ಡ್ (ಪ್ರಮುಖರು) ಮತ್ತು ಸಮಸ್ಯೆಗೆ ಒಳಗಾದ ಅರಣ್ಯವಾಸಿಗಳ ಸಮಕ್ಷಮದಲ್ಲಿ ಮುಕ್ತವಾಗಿ ಚರ್ಚಿಸಲು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಪತ್ರ ಬರೆಯಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.