ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾ ಶ್ರೀ ಸ್ವಾಮಿ ಅಯ್ಯಪ್ಪ ಹಾಗೂ ನಾಗ ಚೌಡೇಶ್ವರಿ ಸನ್ನಿಧಾನದಲ್ಲಿ ಇಂದು, ಜ.4, ಶನಿವಾರದಂದು 37ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವವು ನಡೆಯಲಿದೆ.
ಬೆಳಿಗ್ಗೆ ಗಣಹವನ, ಸ್ವಾಮಿಯ ಪೂಜಾ ಕಾರ್ಯ, ಮಧ್ಯಾಹ್ನ 12-00 ಘಂಟೆಯಿಂದ ಅನ್ನಪೂರ್ಣೇಶ್ವರಿ ಪೂಜೆ ಹಾಗೂ ಶ್ರೀ ಸ್ವಾಮಿ ಅಯ್ಯಪ್ಪ ಅನ್ನದಾನ ಸೇವೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶಿವರಾಮ್ ಹೆಬ್ಬಾರ್, ಭೀಮಣ್ಣ ನಾಯ್ಕ್ ಭಾಗವಹಿಸಲಿದ್ದಾರೆ. ಸಂಜೆ 07-00 ಘಂಟೆಯಿಂದ ಡೊಳ್ಳು ಸೇವೆ ಸಹಿತ ದೀಪೋತ್ಸವ ಹಾಗೂ ಸ್ವಾಮಿ ಮೆರವಣಿಗೆ ಸೇವೆ, ಮಾಲೆ ಹಾಕಿದ ಸ್ವಾಮಿಗಳಿಂದ ಕೆಂಡದ ಮೇಲೆ ನಡೆಯುವ ಸೇವೆ, ವಡೆ ತೆಗೆಯುವ ಕಾರ್ಯಕ್ರಮ, ಹಾಗೂ ಶ್ರೀ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿ, ಹೆಗ್ಗರಣಿ, ಇವರಿಂದ ಯಕ್ಷಗಾನ ಪ್ರದರ್ಶನ “ಲವ ಕುಶ ” ನಡೆಯಲಿದೆ.