ಶಿರಸಿ: ಹಳೆಯ ಕಾಲದಿಂದ ಬಾಯಿಂದ ಬಾಯಿಗೆ ಹರಿದುಬಂದಂತಹ ಜನಪದ ಗೀತೆಗಳು ಇಂದು ನಶಿಸಿಹೋಗುತ್ತಿವೆ. ಅಂತಹ ಜನಪದ ಗೀತೆಗಳನ್ನು ಮತ್ತೆ ನೆನಪಿಸಿ, ಅವುಗಳ ಸೊಗಡನ್ನು ಪರಿಚಯಿಸಿ, ಕಾಯ್ದುಕೊಂಡು ಹೋಗುವ ಉದ್ದೇಶದಿಂದ ‘ಜನಸಂಪದ’ ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದೇವೆ ಎಂದು ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಫೆ.8, ಶನಿವಾರ ಬೆಳಿಗ್ಗೆ 10 ಗಂಟೆಯಿಂದ ನಗರದ ಸಾಮ್ರಾಟ್ ಹೊಟೆಲ್ ಎದುರಿನ ರಂಗಧಾಮ ಆವರಣದಲ್ಲಿ ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ ನಡೆಯಲಿದೆ. ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಸದಸ್ಯರು ಉತ್ತರ ಕನ್ನಡ ಜಿಲ್ಲೆಯವರಾಗಿರಬೇಕು ಹಾಗೂ 18 ವರ್ಷ ಮೇಲ್ಪಟ್ಡವರಾಗಿರಬೇಕು. ಪ್ರವೇಶ ಧನ ಪ್ರತಿ ತಂಡಕ್ಕೆ 400ರೂ. ಪಾವತಿಸಬೇಕಾಗಿದೆ. ಪ್ರಥಮ ಬಹುಮಾನ 8000 ರೂ. ದ್ವಿತೀಯ 6000 ರೂ.,ತೃತೀಯ 4000 ರೂ. ಹಾಗೂ ಪ್ರೋತ್ಸಾಹಕ 2000 ರೂ.ಗಳನ್ನು ಘೋಷಿಸಲಾಗಿದೆ.
ಸ್ಪರ್ಧೆಯ ನಂತರ ತೆರೆಮರೆಯ ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ಸಾಮೂಹಿಕ ರಾಮರಕ್ಷಾ ಸ್ತೋತ್ರ ಪಠಣ, ಕಿರು ನಾಟಕ, ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.
ಗಾಯನ ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವವರು ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ Tel:+919482111131, Tel:+917338498524, Tel:+918073970447 ನಂಬರ್ ಸಂಪರ್ಕಿಸಲು ಕೋರಿದ್ದಾರೆ.